Publish Date: Wed, 25 May 2022 (08:40 IST)
Updated Date: Wed, 25 May 2022 (08:52 IST)
ಮುಂಬೈ: ಐಪಿಎಲ್ 2022 ರಲ್ಲಿ ಇಂದು ಎರಡನೇ ಪ್ಲೇ ಆಫ್ ಪಂದ್ಯ ನಡೆಯಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ.
ಹಾಗೆ ನೋಡಿದರೆ ಕನ್ನಡಿಗರ ಪಾಲಿಗೆ ಎರಡೂ ತಂಡವೂ ಆಪ್ತವೇ. ಲಕ್ನೋಗೆ ಕನ್ನಡಿಗ ಕೆಎಲ್ ರಾಹುಲ್ ನೇತೃತ್ವವಿದೆ. ಅಲ್ಲದೆ, ಲೀಗ್ ಹಂತದ ಪಂದ್ಯಗಳಲ್ಲಿ ರಾಹುಲ್ ಭರ್ಜರಿ ಪ್ರದರ್ಶನ ತೋರಿದ್ದರು. ಇದರಿಂದಾಗಿ ಲಕ್ನೋ ಈ ಬಾರಿ ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿದೆ.
ಆದರೆ ಅತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಈಗ ಬಿಗ್ ಥ್ರೀ ಬ್ಯಾಟಿಗರೇ ಶಕ್ತಿ. ಒಂದು ವೇಳೆ ಗ್ಲೆನ್ ಮ್ಯಾಕ್ಸ್ ವೆಲ್, ವಿರಾಟ್ ಕೊಹ್ಲಿ, ಫಾ ಡು ಪ್ಲೆಸಿಸ್ ಸಿಡಿದರೆ ಬೆಂಗಳೂರನ್ನು ತಡೆಯುವವರೇ ಇಲ್ಲ. ಕೊನೆಯ ಲೀಗ್ ಪಂದ್ಯದಲ್ಲಿ ಕೊಹ್ಲಿ ಬ್ಯಾಟಿಂಗ್ ಮಾಡಿರುವ ರೀತಿ ಎಲ್ಲರಲ್ಲಿ ಭರವಸೆ ಮೂಡಿಸಿದೆ. ಜೊತೆಗೆ ದಿನೇಶ್ ಕಾರ್ತಿಕ್ ಮತ್ತೆ ಫಿನಿಶರ್ ರೋಲ್ ಮಾಡಬೇಕಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.