ಮುಂಬೈ: ಈ ಬಾರಿ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸ್ಟಾರ್ ಬ್ಯಾಟಿಗ ಎಬಿಡಿ ವಿಲಿಯರ್ಸ್ ಅವರನ್ನು ತುಂಬಾ ಮಿಸ್ ಮಾಡಿಕೊಂಡಿತು. ನಿವೃತ್ತಿ ಘೋಷಿಸಿದ್ದ ಎಬಿಡಿ ಸಹಾಯಕ ಸಿಬ್ಬಂದಿಯಾಗಿಯಾದರೂ ತಂಡದ ಜೊತೆಗಿರಲಿದ್ದಾರೆ ಎಂಬ ನಂಬಿಕೆಯಿತ್ತು. ಅದೂ ಸುಳ್ಳಾಗಿತ್ತು.
ಇದು ಅಭಿಮಾನಿಗಳನ್ನು ತೀವ್ರ ನಿರಾಶೆಗೊಳಪಡಿಸಿತ್ತು. ಆದರೆ ಈಗ ಸ್ವತಃ ಎಬಿಡಿ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮುಂದಿನ ಐಪಿಎಲ್ ಗೆ ಆರ್ ಸಿಬಿಗೆ ಕಮ್ ಬ್ಯಾಕ್ ಮಾಡುವುದು ಖಚಿತ ಎಂದಿದ್ದಾರೆ.
ಆದರೆ ಆಟಗಾರನಾಗಿ ವಾಪಸ್ ಆಗುತ್ತಿಲ್ಲ. ಕೋಚ್ ಅಥವಾ ಮೆಂಟರ್ ಆಗಿ ತಂಡಕ್ಕೆ ಬರಲಿದ್ದಾರೆ. ಮತ್ತೆ ಆರ್ ಸಿಬಿ ತಂಡವನ್ನು ಸೇರಿಕೊಳ್ಳುವುದನ್ನು ಎದಿರು ನೋಡುತ್ತಿದ್ದೇನೆ. ವಿರಾಟ್ ಇದನ್ನು ಖಚಿತಪಡಿಸಿದ್ದು ಸಂತೋಷವಾಗಿದೆ. ಮತ್ತೆ ನನ್ನ ಎರಡನೇ ತವರು ಚಿನ್ನಸ್ವಾಮಿ ಮೈದಾನಕ್ಕೆ ಬರುವುದನ್ನು ಕಾದು ಕುಳಿತಿದ್ದೇನೆ ಎಂದಿದ್ದಾರೆ.