Select Your Language

Notifications

webdunia
webdunia
webdunia
webdunia

ಐಪಿಎಲ್ 2022: ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ಯಾರಿಗೆ?

ಐಪಿಎಲ್ 2022: ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ಯಾರಿಗೆ?
ಮುಂಬೈ , ಸೋಮವಾರ, 23 ಮೇ 2022 (11:06 IST)
ಮುಂಬೈ: ಐಪಿಎಲ್ 2022 ರಲ್ಲಿ ಪ್ಲೇ ಆಫ್ ಹಂತದ ಪಂದ್ಯಗಳು ಮುಗಿದಿದ್ದು, ಇದೀಗ ಗರಿಷ್ಠ ವಿಕೆಟ್ ಗಳಿಸಿದವರು ಮತ್ತು ರನ್ ಗಳಿಸಿದವರ ಲಿಸ್ಟ್ ನೋಡೋಣ.

ಇದುವರೆಗೆ ಲೀಗ್ ಹಂತದಲ್ಲಿ ಹಲವು ಬ್ಯಾಟಿಗರು ಭರ್ಜರಿ ರನ್ ಗಳಿಸಿದ್ದಾರೆ. ಈ ಬಾರಿ ಕೆಎಲ್ ರಾಹುಲ್, ಜೋಸ್ ಬಟ್ಲರ್, ಫಾ ಡು ಪ್ಲೆಸಿಸ್, ದಿನೇಶ್ ಕಾರ್ತಿಕ್ ಮುಂತಾದವರು ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಆದರೆ ಗರಿಷ್ಠ ರನ್ ಗಳಿಸಿದ ಆಟಗಾರ ಎಂಬ ದಾಖಲೆ ರಾಜಸ್ಥಾನ್ ರಾಯಲ್ಸ್ ತಂಡದ ಜೋಸ್ ಬಟ್ಲರ್ ಪಾಲಾಗಿದ್ದು, ಅವರಿಗೆ ಆರೆಂಜ್ ಕ್ಯಾಪ್ ಗೌರವ ಸಿಕ್ಕಿದೆ.ಈ ಬಾರಿ ಅವರು ಒಟ್ಟು 627 ರನ್ ಗಳಿಸಿದ್ದಾರೆ.

ಇನ್ನು ಬೌಲರ್ ಗಳ ಪೈಕಿಯೂ ಉಮ್ರಾನ್ ಮಲಿಕ್, ಕುಲದೀಪ್ ಯಾದವ್ ಮುಂತಾದ ಬೌಲರ್ ಗಳು ಗಮನಾರ್ಹ ಪ್ರದರ್ಶನ ನೀಡಿದ್ದರು. ಆದರೆ ಅಂತಿಮವಾಗಿ ಗರಿಷ್ಠ ವಿಕೆಟ್ ಟೇಕರ್ ಎಂಬ ಗೌರವ ರಾಜಸ್ಥಾನ್ ತಂಡದ ಸ್ಪಿನ್ನರ್ ಯಜುವೇಂದ್ರ ಚಾಹಲ್ ಪಾಲಾಗಿದೆ.  14 ಪಂದ್ಯಗಳನ್ನು ಆಡಿರುವ ಚಾಹಲ್ ಇದುವರೆಗೆ 26 ವಿಕೆಟ್ ಕಬಳಿಸಿದ್ದಾರೆ. ರಾಜಸ್ಥಾನ್ ಪ್ಲೇ ಆಫ್ ಹಂತದಲ್ಲಿ ಗೆಲ್ಲಬೇಕಾದರೆ ಚಾಹಲ್ ಬೌಲಿಂಗ್ ನಿರ್ಣಾಯಕವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಫ್ರಿಕಾ, ಇಂಗ್ಲೆಂಡ್ ಸರಣಿಗೆ ಟೀಂ ಇಂಡಿಯಾ ಕ್ರಿಕೆಟಿಗ ಲಿಸ್ಟ್