Select Your Language

Notifications

webdunia
webdunia
webdunia
webdunia

ಐಪಿಎಲ್ 2022: ಕೊನೆಯ ಪಂದ್ಯದಲ್ಲಿ ಪಂಜಾಬ್ ಗೆ ಗೆಲುವಿನ ನಿಟ್ಟುಸಿರು

ಐಪಿಎಲ್ 2022: ಕೊನೆಯ ಪಂದ್ಯದಲ್ಲಿ ಪಂಜಾಬ್ ಗೆ ಗೆಲುವಿನ ನಿಟ್ಟುಸಿರು
ಮುಂಬೈ , ಸೋಮವಾರ, 23 ಮೇ 2022 (08:30 IST)
ಮುಂಬೈ: ಐಪಿಎಲ್ 2022 ರ ಕೊನೆಯ ಲೀಗ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಕಿಂಗ್ಸ್ ಪಂಜಾಬ್ 5 ವಿಕೆಟ್ ಗಳ ಗೆಲುವು ಸಾಧಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿತು. ಅಭಿಷೇಕ್ ಶರ್ಮಾ 43, ಶೆಫರ್ಡ್ ಅಜೇಯ 26 ರನ್ ಗಳಿಸಿದರು. ಹರ್ಪ್ರೀತ್ ಬ್ರಾರ್ 3, ನಥನ್ ಎಲ್ಲಿಸ್ 3 ವಿಕೆಟ್ ಕಬಳಿಸಿದರು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಪಂಜಾಬ್ 15.1 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿ ಗೆಲುವು ಕಂಡಿತು. ಶಿಖರ್ ಧವನ್ 39, ಲಿವಿಂಗ್ ಸ್ಟೋನ್ 49, ಜಿತೇಶ್ ಶರ್ಮಾ 19 ರನ್ ಗಳಿಸಿದರು. ಈ ಫಲಿತಾಂಶ ಪ್ಲೇ ಆಫ್ ಹಂತದ ಪಂದ್ಯಗಳ ಮೇಲೆ ಯಾವುದೇ ಪರಿಣಾಮ ಬೀರದು. ಆದರೆ ಕೊನೆಯ ಪಂದ್ಯದಲ್ಲಿ ಗೆದ್ದ ಖುಷಿ ಪಂಜಾಬ್ ನದ್ದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಎಲ್ ರಾಹುಲ್ ಭಾರತ ಟಿ-20 ತಂಡದ ನಾಯಕ: ದಿನೇಶ್, ಹಾರ್ದಿಕ್ ವಾಪಸ್!