Publish Date: Sun, 22 May 2022 (09:30 IST)
Updated Date: Sun, 22 May 2022 (09:55 IST)
ಮುಂಬೈ: ಐಪಿಎಲ್ 2022 ರಲ್ಲಿ ಮುಂಬೈ ಇಂಡಿಯನ್ಸ್ ನಿನ್ನೆಯ ಪಂದ್ಯದಲ್ಲಿ ಡೆಲ್ಲಿಯನ್ನು ಸೋಲಿಸುತ್ತಿದ್ದಂತೇ ಖುಷಿಪಟ್ಟಿದ್ದು ಆರ್ ಸಿಬಿ. ಆರ್ ಸಿಬಿ ಆಟಗಾರರಾದ ವಿರಾಟ್ ಕೊಹ್ಲಿ, ಫಾ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್ ವೆಲ್ ಮುಂಬೈ ಗೆಲುವನ್ನು ಸಂಭ್ರಮಿಸಿದ್ದಾರೆ.
ಪಂದ್ಯದ ಬಳಿಕ ಮೂವರೂ ಸಂಭ್ರಮಿಸುತ್ತಿರುವ ಕ್ಷಣಗಳನ್ನು ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ನಮ್ಮ ಈ ಕ್ಷಣದ ಫೀಲಿಂಗ್ ಹೀಗಿದೆ ಎಂದಿದ್ದಾರೆ.
ಇನ್ನು, ಆರ್ ಸಿಬಿ ಫ್ಯಾನ್ಸ್ ಕೂಡಾ ನಿನ್ನೆಯ ಗೆಲುವನ್ನು ಸಂಭ್ರಮಿಸಿದ್ದಾರೆ. ಮುಂಬೈ ಗೆದ್ದಿದ್ದರಿಂದ ಆರ್ ಸಿಬಿ ಪ್ಲೇ ಆಫ್ ಹಾದಿ ಸುಗಮವಾಗಿದೆ.