Publish Date: Tue, 24 May 2022 (10:49 IST)
Updated Date: Tue, 24 May 2022 (10:51 IST)
ಮುಂಬೈ: ದುಬಾರಿ ವಾಚ್ ನ್ನು ಕಡಿಮೆ ಬೆಲೆಗೆ ಕೊಡಿಸುತ್ತೇನೆಂದು ಟೀಂ ಇಂಡಿಯಾ ಕ್ರಿಕೆಟಿಗ ರಿಷಬ್ ಪಂತ್ ಗೆ ಹರ್ಯಾಣ ಮೂಲದ ಕ್ರಿಕೆಟಿಗ ಮೃಣಾಂಕ್ 1.63 ಕೋಟಿ ರೂ. ವಂಚನೆ ಮಾಡಿದ್ದಾರೆ. ಇದೀಗ ಹರ್ಯಾಣ ಕ್ರಿಕೆಟಿಗನನ್ನು ಬಂಧಿಸಲಾಗಿದೆ.
ವಾಚ್, ಜ್ಯುವೆಲ್ಲರಿ ಕೊಡಿಸುತ್ತೇನೆಂದು ಹಣ ಪಡೆದಿದ್ದ ಮೃಣಾಂಕ್ ಕೊನೆಗೆ ವಸ್ತುವೂ ಕೊಡಲಿಲ್ಲ, ಹಣವನ್ನೂ ಮರಳಿಸಲಿಲ್ಲ. ಮೃಣಾಂಕ್ ನೀಡಿದ್ದ ಚೆಕ್ ಕೂಡಾ ಬೌನ್ಸ್ ಆಗಿತ್ತು.
ಈ ಹಿನ್ನಲೆಯಲ್ಲಿ ರಿಷಬ್ ಪರ ವಕೀಲರು ದೂರು ಸಲ್ಲಿಸಿದ್ದರು. ಐಪಿಎಲ್ ನಲ್ಲೂ ಆಡಿರುವ ಮೃಣಾಂಕ್ ಸದ್ಯಕ್ಕೆ ವಂಚನೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ.