ಕರ್ನಾಟಕದ 4 ಆರ್ ಎಸ್ ಎಸ್ ಕಚೇರಿಗಳನ್ನು ಸ್ಫೋಟಿಸುವುದಾಗಿ ಬೆದರಿಕೆ ಕರೆ ಬಂದಿವೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಮಾಧ್ಯಮ ಪ್ರಕಟಣೆ ಹೊರಡಿಸಿದ ಅವರು, ಉತ್ತರ ಪ್ರದೇಶದ 2 ಮತ್ತು ಕರ್ನಾಟಕದ 4 ಆರ್ ಎಸ್ ಎಸ್ ಕಚೇರಿಗಳನ್ನು ಸ್ಫೋಟಿಸುವುದಾಗಿ ವಾಟ್ಸಪ್ ಮೂಲಕ ಬೆದರಿಕೆ ಕರೆ ಬಂದಿವೆ ಎಂದಿದ್ದಾರೆ.
ಆರ್ ಎಸ್ ಎಸ್ ಕಚೇರಿಗಳಿಗೆ ಕೂಡಲೇ ಹೆಚ್ಚಿನ ಭದ್ರತಾ ವ್ಯವಸ್ಥೆ ಮಾಡಲಾಗಿದ್ದು ಸೂಕ್ತ ರಕ್ಷಣೆ ನೀಡಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.