Select Your Language

Notifications

webdunia
webdunia
webdunia
webdunia

ಬಾಂಗ್ಲಾದಲ್ಲಿ ಭಾರೀ ಅಗ್ನಿ ದುರಂತ: 43 ಮಂದಿ ಸಜೀವದಹನ

ಬಾಂಗ್ಲಾದಲ್ಲಿ ಭಾರೀ ಅಗ್ನಿ ದುರಂತ: 43 ಮಂದಿ ಸಜೀವದಹನ
bengaluru , ಭಾನುವಾರ, 5 ಜೂನ್ 2022 (17:01 IST)

ಕಂಟೇನರ್ ವಿಭಾಗದಲ್ಲಿ ಭಾರೀ ಸ್ಫೋಟ ಸಂಭವಿಸಿದ ಪರಿಣಾಮ ಕನಿಷ್ಠ 43 ಮಂದಿ ಮೃತಪಟ್ಟು 450ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಆಘಾತಕಾರಿ ಘಟನೆ ಬಾಂಗ್ಲಾದೇಶದಲ್ಲಿ ಸಂಭವಿಸಿದೆ.

ದೇಶದ ಸಮುದ್ರ ತೀರದ ಪ್ರಮುಖ ನಗರವಾದ ಚಿತ್ತಗಾಂಗ್ ನ ಕದಮ್ರಸುಲ್ ಪ್ರದೇಶದಲ್ಲಿ ಶನಿವಾರ ತಡರಾತ್ರಿ ಈ ದುರಂತ ಸಂಭವಿಸಿದ್ದು, ಘಟನಾ ಸ್ಥಳಕ್ಕೆ ದೌಡಾಯಿಸಿದ 5 ಅಗ್ನಿಶಾಮಕ ದಳದ ವಾಹನಗಳು ಬೆಂಕಿ ನಂದಿಸಿವೆ.

ಕಂಟೇನರ್ ವಿಭಾಗದಲ್ಲಿ ಭಾರೀ ದೊಡ್ಡ ಸ್ಫೋಟ ಕೇಳಿ ಬಂದ ಬೆನ್ನಲ್ಲೇ ಬೆಂಕಿ ಕಾಣಿಸಿಕೊಂಡಿದೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಇಲ್ಲಿಯವರೆಗೆ 43 ಮೃತದೇಹಗಳನ್ನು ಹೊರಗೆ ತೆಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ದೇಶದಲ್ಲಿ ಮತ್ತೆ ಕೊರೊನಾ ಜಿಗಿತ: 4270 ಪಾಸಿಟಿವ್ ದೃಢ