Publish Date: Sun, 29 May 2022 (13:29 IST)
Updated Date: Sun, 29 May 2022 (14:31 IST)
ಭೂಪಾಲ್ : ಜಾತ್ರೆಯೊಂದರಲ್ಲಿ ಪಾನಿಪುರಿ ತಿಂದ 97 ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ಮಧ್ಯಪ್ರದೇಶದ ಮಂಡ್ಲಾ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲಾ ಕೇಂದ್ರದಿಂದ 38 ಕಿ.ಮೀ ದೂರದಲ್ಲಿರುವ ಬುಡಕಟ್ಟು ಜನಾಂಗದ ಪ್ರಾಬಲ್ಯವಿರುವ ಸಿಂಗರಾಪುರ ಪ್ರದೇಶದಲ್ಲಿ ಆಯೋಜಿಸಿದ್ದ ಜಾತ್ರೆಯಲ್ಲಿ ಈ ಘಟನೆ ನಡೆದಿದೆ. ಅಸ್ವಸ್ಥಗೊಂಡವರೆಲ್ಲರೂ ಒಂದೇ ಅಂಗಡಿಯಲ್ಲಿ ಪಾನಿಪುರಿಯನ್ನು ತಿಂದಿದ್ದಾರೆ. ಅವರೆಲ್ಲರೂ ಸಮೀಪದ ವಿವಿಧ ಗ್ರಾಮಗಳಿಂದ ಖರೀದಿಗೆಂದು ಆಗಮಿಸಿದ್ದರು.
ಜಿಲ್ಲಾ ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ.ಕೆ.ಆರ್.ಶಾಕ್ಯಾ ಮಾತನಾಡಿ, ಪಾನಿಪುರಿ ತಿಂದ ಮಕ್ಕಳಿಗೆಲ್ಲರಿಗೂ ವಾಂತಿ, ಹೊಟ್ಟೆನೋವು ಕಾಣಿಸಿಕೊಂಡಿದೆ ಎಂದು ತಿಳಿಸಿದ್ದಾರೆ.
ಅಸ್ವಸ್ತಗೊಂಡ 97 ಮಕ್ಕಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ.