Publish Date: Wed, 13 Apr 2022 (09:31 IST)
Updated Date: Wed, 13 Apr 2022 (09:36 IST)
ಚಂಡೀಗಢ : ಫರೂಖ್ನಗರ ಸಮೀಪದ ಮುಬರಿಕ್ಪುರದಲ್ಲಿ ನಡೆದ ಜಾತ್ರೆಯಲ್ಲಿ ದೇವಸ್ಥಾನವೊಂದರ ಪ್ರಸಾದ ಸೇವಿಸಿ ಮಕ್ಕಳು ಸೇರಿದಂತೆ ಸುಮಾರು 28 ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಂಗಳವಾರ ರಾತ್ರಿ ಜಾತ್ರೆಗೆ ಬಂದಿದ್ದ ಜನರಿಗೆ ಜ್ಯೂಸ್ ನೀಡಲಾಗಿತ್ತು. ಜ್ಯೂಸ್ ಕುಡಿದ ನಂತರ 8ರಿಂದ 10 ಮಕ್ಕಳು ಸೇರಿದಂತೆ 28 ಮಂದಿ ಅಸ್ವಸ್ಥರಾಗಿದ್ದಾರೆ. ನಂತರ ಅವರನ್ನು ಕೂಡಲೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಇದೀಗ ಅಸ್ವಸ್ಥಗೊಂಡವರಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಎಲ್ಲರ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ಈ ಸಂಬಂಧ ಇದೀಗ ಪೊಲೀಸರು ತನಿಖೆ ಆರಂಭಿಸಿದ್ದಾರೆ.