Select Your Language

Notifications

webdunia
webdunia
webdunia
webdunia

ಜಾತ್ರೆ ಮಾಡೋಕೆ ಅಧಿವೇಶನ ಮಾಡುವುದು ಬೇಡ: ಯತ್ನಾಳ್

ಜಾತ್ರೆ ಮಾಡೋಕೆ ಅಧಿವೇಶನ ಮಾಡುವುದು ಬೇಡ: ಯತ್ನಾಳ್
ಬೆಳಗಾವಿ , ಶುಕ್ರವಾರ, 24 ಡಿಸೆಂಬರ್ 2021 (16:08 IST)
ಬೆಳಗಾವಿ : ಅಧಿವೇಶನದ ಪ್ರಾರಂಭದಲ್ಲೇ ಉತ್ತರ ಕನ್ನಡದ ಬಗ್ಗೆ ಚರ್ಚೆ ಆಗಬೇಕಿತ್ತು. ಇನ್ನು ಮುಂದೆ ಉತ್ತರ ಕನ್ನಡದ ಬಗ್ಗೆ ಚರ್ಚೆ ಮಾಡೋದಾದರೆ ಅಧಿವೇಶನದಲ್ಲಿ ಮಾಡಲಿ.

ಜಾತ್ರೆ ಮಾಡುವುದಕ್ಕೆ ಅಧಿವೇಶನ ಮಾಡುವುದು ಬೇಡ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯನವರ ಇಂದಿನ ನಡವಳಿಕೆ, ಕೂಗಾಟ ಅಸಹ್ಯಕರವಾಗಿತ್ತು ಎಂದು ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಅಧಿವೇಶನದ ಹಿನ್ನೆಲೆಯಲ್ಲಿ ಯತ್ನಾಳ್ ಹೇಳಿಕೆ ನೀಡಿದರು.ಂಡಿ

ಉತ್ತರ ಕನ್ನಡದ ಬಗ್ಗೆ ಉದ್ದೇಶಪೂರ್ವಕವಾಗಿ ಚರ್ಚೆ ಆಗಲಿಲ್ಲ. ವಿರೋಧ ಪಕ್ಷದವರೂ ಚರ್ಚೆ ಮಾಡಲಿಲ್ಲ. ಆಡಳಿತ ಪಕ್ಷದವರು ಸರಿಯಾಗಿ ಉತ್ತರ ನೀಡಲು ಬಿಡಲಿಲ್ಲ. ಸಿಎಂ ಮೊದಲ 5 ದಿನ ಚರ್ಚೆ ಮಾಡಲು ಹೇಳಬೇಕಿತ್ತು ಎಂದರು.

ಸಿದ್ದರಾಮಯ್ಯ ನಿನ್ನೆ ಬಿಲ್ ಪಾಸ್ ಬಳಿಕ ಹತಾಶರಾಗಿದ್ದಾರೆ. ಹಿರಿಯ ಕಾಂಗ್ರೆಸ್ ಸದಸ್ಯರೊಬ್ಬರು ಕಾಗದ ಹರಿದು ಹಾಕಿ ಸೋನಿಯಾ ಗಾಂಧಿಗೆ ಫೋಟೋ ತೋರಿಸಲು ಹೋಗಿದ್ದಾರೆ.

ಈ ಅಧಿವೇಶನ ಜಾತ್ರೆ ಆದಂತೆ ಆಗಿದೆ. ನಮಗೂ ಹತಾಶೆಯಾಗಿದೆ. ಇದೇ ರೀತಿಯಾದರೆ ಸುವರ್ಣ ಸೌಧ ಮುಂದೆ ಗೋಲಗುಮ್ಮಟ ತರ ಪ್ರವಾಸಿ ಮಂದಿರ ಆಗುತ್ತದೆ ಎಂದು ವ್ಯಂಗ್ಯ ಮಾಡಿದರು.

 

Share this Story:

Follow Webdunia kannada

ಮುಂದಿನ ಸುದ್ದಿ

UP ಚುನಾವಣೆ ಮುಂದೂಡಿಕೆ!