Select Your Language

Notifications

webdunia
webdunia
webdunia
webdunia

ಸದನದಲ್ಲಿ ಗದ್ದಲ, ಮಾತಿನ ಚಕಮಕಿ!

ಅಧಿವೇಶನ
ಬೆಳಗಾವಿ , ಗುರುವಾರ, 23 ಡಿಸೆಂಬರ್ 2021 (17:09 IST)
ಬೆಳಗಾವಿ : ವಿಪಕ್ಷಗಳ ತೀವ್ರ ವಿರೋಧದ ನಡುವೆ ವಿಧಾನಸಭೆಯಲ್ಲಿ ಮತಾಂತರ ತಡೆ ವಿಧೇಯಕ ಅಂಗೀಕಾರಗೊಂಡಿದೆ.

ಕಾಂಗ್ರೆಸ್ನವರು ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ಇದು ಸಮಾಜದ ಪರ ಇರುವ ಮಸೂದೆ ಎಂದ ಬಸವರಾಜ ಬೊಮ್ಮಾಯಿ ಕಿಡಿಕಾರಿದರು. ದ್ವಿಮುಖ ನೀತಿ ಕಾಂಗ್ರೆಸ್ನದ್ದು, ಈ ಹಿಂದೆ 2014ರಿಂದ 2016ರ ಅವಧಿಯಲ್ಲಿ ಕಾಂಗ್ರೆಸ್ ಮತಾಂತರ ಬಿಲ್ ಮಂಡಿಸಲು ಮುಂದಾಗಿತ್ತು.

ನಿಮ್ಮ ಕಾನೂನು ಸಚಿವರು ಪರಿಶೀಲನೆಗೆ ಒಪ್ಪಿ ಸಹಿ ಹಾಕಿದ್ದಾರೆ. ಆರ್ಎಸ್ಎಸ್ ಕಾನೂನು ಪರ ಇದೆ, ಇದು ಓಪನ್ ಸೀಕ್ರೆಟ್. ಆರ್ಎಸ್ಎಸ್ ನೀತಿಯನ್ನು ಏಕೆ ಒಪ್ಪಿ ನೀವು ಬಿಲ್ ಪರಿಶೀಲನೆ ಮಾಡಿದ್ರಿ ಎಂದು ಸಿದ್ದರಾಮಯ್ಯಗೆ ಬೊಮ್ಮಾಯಿ ತಿರುಗೇಟು ನೀಡಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರು ಜಿಲ್ಲೆ 100ರಷ್ಟು ವ್ಯಾಕ್ಸಿನ್