Publish Date: Wed, 22 Dec 2021 (14:24 IST)
Updated Date: Wed, 22 Dec 2021 (18:13 IST)
ಗಡಿ ಜಿಲ್ಲೆ ಬೆಳಗಾವಿಯಲ್ಲಿ (Belagavi) ಎಂಇಎಸ್(MES) ಪುಂಡರ ಪುಂಡಾಟ ಮಿತಿ ಮೀರಿದ್ದು, ಅದನ್ನು ವಿರೋಧಿಸಿ ರಾಜ್ಯದೆಲ್ಲೆಡೆ ಆಕ್ರೋಶದ ಕಟ್ಟೆ ಹೊಡೆದಿದೆ.
ಅಲ್ಲದೇ ರಾಜ್ಯದಲ್ಲಿ ಎಂಇಎಸ್ ಬ್ಯಾನ್(MES Ban) ಮಾಡಬೇಕೆಂಬ ಕೂಗು ಜೊರಾಗಿದೆ.ಕರ್ನಾಟಕದಲ್ಲಿ ಧೈರ್ಯವಿದ್ದರೆ ಎಂಇಎಸ್ ನ್ನು ನಿಷೇಧಿಸಲಿ ಎಂದು ಅವರು ಬೊಮ್ಮಯಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ. ಈ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ.
ಶಿವಾಜಿ ಹೆಸರಿನಲ್ಲಿ ಮತ ಕೇಳುವ ಬಿಜೆಪಿ, ಬೆಂಗಳೂರಿನಲ್ಲಿ ಶಿವಾಜಿ ಮೂರ್ತಿಗೆ ಮಸಿ ಬಳಿದರೂ ಮೌನ ವಹಿಸಿದೆ. ಆದರೆ, ಇನ್ನೊಂದೆಡೆ ಮೊಘಲರ ವಿರುದ್ಧ ಶಿವಾಜಿ ಮಹಾರಾಜರ ಹೋರಾಟ ಬಣ್ಣಿಸುತ್ತಿದೆ. ಈಗ ಇಷ್ಟೊಂದು ಅವಮಾನವಾದರೂ ಮೌನ ವಹಿಸಿದೆ. ಕೇಂದ್ರದ ಯಾವೊಬ್ಬ ಬಿಜೆಪಿ ಸಂಸದರೂ ಈ ಕುರಿತು ಮಾತನಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ.