Select Your Language

Notifications

webdunia
webdunia
webdunia
webdunia

ಸಂಜೆಯೊಳಗೆ ಎಂಇಎಸ್ ನಿಷೇಧಿಸಿ: ಇಲ್ಲದಿದ್ರೆ ಕರ್ನಾಟಕ ಬಂದ್- ವಾಟಾಳ್ ನಾಗರಾಜ್ ಎಚ್ಚರಿಕೆ

ಸಂಜೆಯೊಳಗೆ ಎಂಇಎಸ್ ನಿಷೇಧಿಸಿ: ಇಲ್ಲದಿದ್ರೆ ಕರ್ನಾಟಕ ಬಂದ್- ವಾಟಾಳ್ ನಾಗರಾಜ್ ಎಚ್ಚರಿಕೆ
bangalore , ಸೋಮವಾರ, 20 ಡಿಸೆಂಬರ್ 2021 (22:07 IST)
ಬೆಂಗಳೂರು:-ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ವಿರೂಪಗೊಳಿಸಿ ಸರ್ಕಾರಿ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ ಎಂಇಎಸ್ ಅನ್ನು ಸಂಜೆಯೊಳಗೆ ನಿಷೇಧಿಸದಿದ್ದರೇ ಕರ್ನಾಟಕ ಬಂದ್ ಮಾಡುವುದಾಗಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ವಾಟಾಳ್ ನಾಗರಾಜ್,  ಉದ್ಧವ್ ಠಾಕ್ರೆ ಸರ್ಕಾರ ವಜಾ ಮಾಡಬೇಕು. ಸಿಎಂ ಆಗಿರಲು ಉದ್ಧವ್ ಠಾಕ್ರೆ ಯೋಗ್ಯರಲ್ಲ. ಕನ್ನಡ ಹೋರಾಟಗಾರರು ಯಾವುದೇ ತ್ಯಾಗಕ್ಕೂ ಸಿದ್ಧ. ಬುಧವಾರ ಎಲ್ಲಾ ಸಂಘಟನೆಗಳ ಸಭೆ ನಡೆಯಲಿದೆ. ಎಂಇಎಸ್ ನಿಷೇಧ ಮಾಡದಿದ್ರೆ ಹೋರಾಟ ಮಾಡುತ್ತೇವೆ. ಕರ್ನಾಟಕ ಬಂದ್ ಬಗ್ಗೆ ಅಂತಿಮ ನಿರ್ಧಾರ ಮಾಡುತ್ತೇವೆ. ಬಂದ್ ವೇಳೆ  1 ಲಕ್ಷ ಜನ ಸೇರಿಸುತ್ತೇವೆ ಎಂದು ವಾಟಾಳ್ ನಾಗರಾಜ್ ತಿಳಿಸಿದರು.
ಕನ್ನಡ ಭಾವುಟ ಸುಟ್ಟರೂ ಸಂಸದರು ಮಾತನಾಡಿಲ್ಲ. ಸಂಸದರನ್ನ ಹರಾಜು ಹಾಕುತ್ತೇವೆ. ಬೆಳಗಾವಿ ರಾಜಕಾರಣಿಗಳು ಕನ್ನಡ ದ್ರೋಹಿಗಳು ಎಂದು ವಾಟಾಳ್ ನಾಗರಾಜ್ ವಾಗ್ದಾಳಿ ನಡೆಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಮತ್ತೆ ಸಿಎಂ ಬದಲಾವಣೆ ಚರ್ಚೆ: ಅಧಿಕಾರ ಶಾಶ್ವತವಲ್ಲ ಎಂದ ಬಸವರಾಜ ಬೊಮ್ಮಾಯಿ