Publish Date: Wed, 22 Dec 2021 (14:12 IST)
Updated Date: Wed, 22 Dec 2021 (18:00 IST)
ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಬ್ಬರು ಅಂತರ್‍ರಾಜ್ಯ ಡ್ರಗ್ಸ್ ಪೆಡ್ಲರ್ಸ್ ಗಳನ್ನು ಮೈಕೋಲೇಔಟ್ ಠಾಣೆ ಪೊಲೀಸರು ಬಂಧಿಸಿ 5 ಕೋಟಿ ರೂ. ಮೌಲ್ಯದ 5ಕೆಜಿ ಹ್ಯಾಸ್ ಹಾಯಿಲ್ ಮತ್ತು ಒಂದು ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.ಮಾದಕ ವಸ್ತು ಮಾರಾಟ ಮಾಡುವವರ ಬಗ್ಗೆ ಮಾಹಿತಿ ಸಂಗ್ರಹಿಸಿ ಅವರನ್ನು ಪತ್ತೆ ಮಾಡಿ ಕಾನೂನು ರೀತಿ ಕ್ರಮ ಜರುಗಿಸುವಂತೆ ನಗರ ಪೊಲೀಸ್ ಆಯುಕ್ತರಾದ ಕಮಲ್‍ಪಂತ್, ಹೆಚ್ಚುವರಿ ಪೊಲೀಸ್ ಆಯುಕ್ತರಾದ ಮುರುಗನ್ ಅವರು ಸೂಚನೆ ನೀಡಿದ್ದರು. ಅದರಂತೆ ಮೈಕೋಲೇಔಟ್ ಠಾಣೆಯ ಇನ್ಸ್‍ಪೆಕ್ಟರ್ ಅವರನ್ನೊಳಗೊಂಡ ಒಂದು ತಂಡ ರಚಿಸಲಾಗಿತ್ತು.