Select Your Language

Notifications

webdunia
webdunia
webdunia
Sunday, 13 April 2025
webdunia

ಶಾದಿ ಕರೋಗೆ ಅಂತ ಬಂದವನು ದೋಖಾ ಕೊಟ್ಟ

ಮದುವೆ
ಬೆಂಗಳೂರು , ಬುಧವಾರ, 22 ಡಿಸೆಂಬರ್ 2021 (09:50 IST)
ಬೆಂಗಳೂರು: ಆನ್ ಲೈನ್ ವೈವಾಹಿಕ ಅಂಕಣ ಮೂಲಕ ಪರಿಚಯವಾದ ವರನನ್ನು ಮದುವೆಯಾದ ಯುವತಿಯೊಬ್ಬಳು ಈಗ ವಂಚನೆಗೊಳಗಾಗಿ ಪೊಲೀಸರ ಮೊರೆ ಹೋಗಿದ್ದಾಳೆ.

ಬೆಂಗಳೂರಿನ ರಿಹಾನಾ ಶಾದಿ ಡಾಟ್ ಕಾಮ್ ಮೂಲಕ ಪರಿಚಯವಾಗಿದ್ದ ತಹ್ಸೀನ್ ಅಹಮ್ಮದ್ ಎಂಬಾತನನ್ನು ಮದುವೆಯಾಗಿದ್ದಳು.  ಮದುವೆಯಾದ ಮೇಲೂ ಪತ್ನಿ ಮನೆಯಲ್ಲಿಯೇ ಇದ್ದ. ಒಂದು ತಿಂಗಳ ಬಳಿಕ ಬಿಸಿನೆಸ್ ಮಾಡಲು ಹಣಬೇಕೆಂದು ಪೀಡಿಸಲಾರಂಭಿಸಿದ. ಕೊನೆಗೆ ರಿಹಾನ ತನ್ನ ಬಳಿಯಿದ್ದ 2 ಲಕ್ಷ ರೂ. ಹಣ, ಚಿನ್ನಾಭರಣ ನೀಡಿದ್ದಳು.

ಇದನ್ನು ಪಡೆದುಕೊಂಡು ಗಂಡ ಎನಿಸಿಕೊಂಡವನು ಮನೆಯಿಂದ ಹೋದವನು ಇದುವರೆಗೆ ಪತ್ತೆಯಾಗಿಲ್ಲ ಎಂದು ರಿಹಾನ ಈಗ ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾಳೆ. ವಿಚಾರಣೆ ವೇಳೆ ಆರೋಪಿ ಇದೇ ರೀತಿ ಐದಾರು ಬಾರಿ ಮದುವೆಯಾಗಿ ಬೇರೆಯವರಿಗೂ ವಂಚಿಸಿರುವುದು ಪತ್ತೆಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪತಿನಿಷ್ಠೆ ಪ್ರಶ್ನಿಸಿದ್ದಕ್ಕೆ ಪತಿಯನ್ನೇ ಕೊಂದ ಪತ್ನಿ!