Select Your Language

Notifications

webdunia
webdunia
webdunia
webdunia

ಪತಿನಿಷ್ಠೆ ಪ್ರಶ್ನಿಸಿದ್ದಕ್ಕೆ ಪತಿಯನ್ನೇ ಕೊಂದ ಪತ್ನಿ!

ಪತಿನಿಷ್ಠೆ ಪ್ರಶ್ನಿಸಿದ್ದಕ್ಕೆ ಪತಿಯನ್ನೇ ಕೊಂದ ಪತ್ನಿ!
ಚೆನ್ನೈ , ಬುಧವಾರ, 22 ಡಿಸೆಂಬರ್ 2021 (09:10 IST)
ಚೆನ್ನೈ: ಶೀಲ ಶಂಕಿಸಿದ ಪತಿಯನ್ನು ಪತ್ನಿಯನ್ನೇ ಕಬ್ಬಿಣದ ರಾಡ್ ನಿಂದ ಹೊಡೆದು ಕೊಲೆ ಮಾಡಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಈ ಸಂಬಂಧ 38 ವರ್ಷದ ಮಹಿಳೆಯನ್ನು ಬಂಧಿಸಲಾಗಿದೆ.

ಶೀಲ ಶಂಕಿಸಿದ ಪತಿಯ ಜೊತೆ ವಾಗ್ವಾದವಾಗಿತ್ತು. ಈ ವೇಳೆ ಪತ್ನಿ ಕಬ್ಬಿಣದ ರಾಡ್ ನಿಂದ ಹೊಡೆದ ಪರಿಣಾಮ ಆತ ಸಾವನ್ನಪ್ಪಿದ್ದಾನೆ. ಬಳಿಕ ತಪ್ಪಿಸಿಕೊಳ್ಳಲು ಪತ್ನಿ ಪತಿ ತನ್ನ ಕೈ ಕಡಿಯಲು ಬಂದಿದ್ದರಿಂದ ಗಾಯವಾಗಿದೆ ಎಂದು ನಾಟಕವಾಡಿ ಆಸ್ಪತ್ರೆ ಸೇರಿಕೊಂಡಿದ್ದಾಳೆ.

ಈ ವೇಳೆ ನೆರೆಮನೆಯವರು ಮನೆಗೆ ಬಂದು ನೋಡಿದಾಗ ಪತಿಯ ಕೋಣೆ ಒಳಗಿನಿಂದ ಲಾಕ್ ಆಗಿತ್ತು. ತಕ್ಷಣವೇ ಪೊಲೀಸರಿಗೆ ಸುದ್ದಿ ಮುಟ್ಟಿಸಲಾಗಿದ್ದು, ಸ್ಥಳಕ್ಕೆ ಬಂದ ಪೊಲೀಸರಿಗೆ ಕೊಲೆಯಾಗಿರುವುದು ಗೊತ್ತಾಗಿದೆ. ಪತ್ನಿಯನ್ನು ವಿಚಾರಿಸಿದಾಗ ನಿಜ ವಿಚಾರ ಬಯಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊವಿಡ್ 19: ಎಚ್ಚರಿಕೆ ನೀಡಿದ ವಿಜ್ಞಾನಿಗಳು!