Select Your Language

Notifications

webdunia
webdunia
webdunia
webdunia

ಯುವಕನನ್ನು ಪ್ರೀತಿಸಿದ್ದಕ್ಕೆ ಮಗಳನ್ನು ಕೊಂದ ಪೋಷಕರು!

ಯುವಕನನ್ನು ಪ್ರೀತಿಸಿದ್ದಕ್ಕೆ ಮಗಳನ್ನು ಕೊಂದ ಪೋಷಕರು!
ಮೈಸೂರು , ಬುಧವಾರ, 8 ಜೂನ್ 2022 (08:35 IST)
ಮೈಸೂರು : ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದ ಅಪ್ರಾಪ್ತ ಮಗಳನ್ನು ತಂದೆ ಮತ್ತು ತಾಯಿ ಇಬ್ಬರು ಸೇರಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ನಡೆದಿದೆ.

ಎರಡನೇ ಪಿಯು ವಿದ್ಯಾರ್ಥಿನಿ ಶಾಲಿನಿ (17) ಕೊಲೆಗೀಡಾದ ಅಪ್ರಾಪ್ತೆ. ಈಗಾಗಲೇ ಮಗಳನ್ನು ಕೊಂದ ಆರೋಪದ ಮೇಲೆ ತಂದೆ ಸುರೇಶ್ ಹಾಗೂ ತಾಯಿ ಬೇಬಿಯನ್ನು ಬಂಧಿಸಿದ್ದಾರೆ.

ಕೊಲೆಗೀಡಾದ ಅಪ್ರಾಪ್ತೆಯು ಪಕ್ಕದ ಗ್ರಾಮದ ಮೆಲ್ಲಹಳ್ಳಿಯ ಯುವಕ ಮಂಜು ಅನ್ನು ಪ್ರೀತಿಸುತ್ತಿದ್ದಳು. ಇವರಿಬ್ಬರ ಪ್ರೀತಿಗೆ ಶಾಲಿನಿ ಪೋಷಕರು ವಿರೋಧಿಸಿದ್ದರು.  

ಪ್ರೇಮಿಗಳು ಮದುವೆಯಾಗಲು ನಿರ್ಧರಿಸಿದ್ದರು. ಪ್ರಿಯಕರನಿಗಾಗಿ ಶಾಲಿನಿ ಮನೆ ಬಿಟ್ಟಿದ್ದಳು. ಇದೇ ವಿಚಾರ ಪೊಲೀಸ್ ಠಾಣೆ ಮೆಟ್ಟಲೇರಿತ್ತು. ಪೊಲೀಸರ ಮುಂದೆ ಶಾಲಿನಿ ಮನೆಗೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಳು. ಹೀಗಾಗಿ ಶಾಲಿನಿ ಬಾಲಮಂದಿರಕ್ಕೆ ಸೇರಿಕೊಂಡಿದ್ದಳು.  

ಇತ್ತೀಚೆಗಷ್ಟೆ ಮಗಳನ್ನು ಪೋಷಕರಾದ ಸುರೇಶ್ ಹಾಗೂ ಬೇಬಿ ಮನೆಗೆ ಕರೆ ತಂದು ಮಗಳನ್ನು ಕೊಲೆ ಮಾಡಿದ್ದಾರೆ. ಶಾಲಿನಿ ಮೃತದೇಹ ಜಮೀನೊಂದರಲ್ಲಿ ಪತ್ತೆಯಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮೆಟ್ರೋದಲ್ಲಿ ಸೈಕಲ್ ಕೊಂಡೊಯ್ಯಬಹುದು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ!