Select Your Language

Notifications

webdunia
webdunia
webdunia
webdunia

ಮೆಟ್ರೋದಲ್ಲಿ ಸೈಕಲ್ ಕೊಂಡೊಯ್ಯಬಹುದು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ!

namma metro cycleist bengaluru ಬೆಂಗಳೂರು ನಮ್ಮ ಮೆಟ್ರೋ ಸೈಕ್ಲಿಸ್ಟ್
bengaluru , ಮಂಗಳವಾರ, 7 ಜೂನ್ 2022 (23:50 IST)
ನಮ್ಮ ಮೆಟ್ರೋದಲ್ಲಿ ಇನ್ಮುಂದೆ ಸೈಕಲ್ ಕೊಂಡೊಯ್ಯಲು ಬಿಎಂಆರ್‌ ಸಿಎಲ್ (BMRCL) ಅನುಮತಿ ನೀಡಿದೆ. ಈ ಮೂಲಕ ಪ್ರಯಾಣಿಕರಿಗೆ ಬಂಪರ್‌ ಸುದ್ದಿ ನೀಡಿದೆ.
ಮಡಚಬಹುದಾದ ಸೈಕಲ್ ಅನ್ನು (Folding Bicycle) ಮೆಟ್ರೋದ ಕೊನೆಯ ಭೋಗಿಯಲ್ಲಿ ಕೊಂಡೊಯ್ಯಲು ಅವಕಾಶ ನೀಡಲಾಗಿದೆ. 60 mm × 45 mm × 25 mm ನ 15 kg ತೂಕದವರೆಗಿನ ಸೈಕಲ್ ಅನ್ನು ಮೆಟ್ರೋ ರೈಲಿನಲ್ಲಿ ಕೊಂಡೊಯ್ಯಬಹುದಾಗಿದೆ. ಸೈಕಲ್ ಗೆ ಯಾವುದೇ ಲಗೇಜ್ ಚಾರ್ಜ್ ಇರುವುದಿಲ್ಲ. ಇದು ಸಂಪೂರ್ಣ ಉಚಿತ ಎಂದು ನಮ್ಮ ಮೆಟ್ರೋ ಮಂಗಳವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ. 
ಹಲವು ಸಂಘ ಸಂಸ್ಥೆಗಳಿಂದ ಸೈಕಲ್ ರವಾನಿಸಲು ಅವಕಾಶ ಕೊಡುವಂತೆ ಹಲವು ಬಾರಿ ಮನವಿ. ವಾಯುಮಾಲಿನ್ಯ ಹಾಗೂ ಟ್ರಾಫಿಕ್ ಸಮಸ್ಯೆಗೆ ಈ ಮೂಲಕ ಪರಿಹಾರವಾಗಲಿದೆ ಎಂದು ಸಂಘ ಸಂಸ್ಥೆಗಳು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಮೆಟ್ರೋ ಪ್ರಯಾಣಿಕರಿಗೆ ಸೈಕಲ್ ನಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಇನ್ನೂ 3 ದಿನ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ