Select Your Language

Notifications

webdunia
webdunia
webdunia
webdunia

ಬೆಂಗಳೂರಿನಲ್ಲಿ ಉಗ್ರನ ಬಂಧಿಸಿದ ಜಮ್ಮು ಕಾಶ್ಮೀರ ಪೊಲೀಸರಿಗೆ ಅಗತ್ಯ ನೆರವು: ಸಿಎಂ ಬೊಮ್ಮಾಯಿ

jammu kashmir police cm bommai ಜಮ್ಮು ಕಾಶ್ಮೀರ ಸಿಎಂ ಬೊಮ್ಮಾಯಿ ಕರ್ನಾಟಕ
bengaluru , ಮಂಗಳವಾರ, 7 ಜೂನ್ 2022 (16:54 IST)

ಬೆಂಗಳೂರಿನಲ್ಲಿ ಭಯೋತ್ಪಾದಕನೊಬ್ಬನ ಬಂಧನವಾಗಿದೆ. ಜಮ್ಮು ಕಾಶ್ಮೀರ ಪೊಲೀಸರಿಗೆ ರಾಜ್ಯ ಸರ್ಕಾರ ಅಗತ್ಯ ನೆರವು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಹೊಸಕೋಟೆಗೆ ತೆರೆಳುವ ಮುನ್ನ ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಶಯಾಸ್ಪದ ವ್ಯಕ್ತಿಗಳ ಚಲನವಲನ ಮೇಲೆ ನಿರಂತರವಾಗಿ ಕಣ್ಣಿರುತ್ತದೆ. ಹಿಂದೆ ಭಟ್ಕಳ,  ಶಿರಸಿಯಲ್ಲಿಯೂ ಬಂಧನಗಳಾಗಿವೆ. ಜಮ್ಮು ಕಾಶ್ಮೀರ   ಪೊಲೀಸರಿಗೆ ಅಗತ್ಯ ಸಹಕಾರ ನೀಡಲಾಗುವುದು ಎಂದರು.
ಇದೇ ವೇಳೆ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಲು ಕೂಡಲ ಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ  ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ  "ಅವರು ನಮ್ಮ ಸ್ವಾಮಿಗಳು. ಅವರದ್ದೇ ಮನೆ. ತೊಂದರೆ ಏನೂ ಇಲ್ಲ. ಅವರ ಬಳಿ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ. ಆ ಸಮಾಜದ ಪ್ರಮುಖರು ಕೃಷ್ಣಾದಲ್ಲಿ ಭೇಟಿಯಾಗಿ ಹಲವಾರು ವಿಚಾರಗಳನ್ನು ಚರ್ಚಿಸಲಾಗಿದೆ ಎಂದರು. 2-3 ದಿನಗಳಲ್ಲಿ ಪುನಃ ಸ್ವಾಮೀಜಿ ಗಳೊಂದಿಗೆ ಚರ್ಚೆ ಮಾಡಲಾಗುವುದು ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕದ 4 ಆರ್‌ ಎಸ್‌ ಎಸ್‌ ಕಚೇರಿ ಸ್ಫೋಟ ಬೆದರಿಕೆ: ಅರಗ ಜ್ಞಾನೇಂದ್ರ