Select Your Language

Notifications

webdunia
webdunia
webdunia
webdunia

ದೇವಸ್ಥಾನ ಮುಂಭಾಗ ಕೋಲಾರ ನಗರಸಭೆ ಸದಸ್ಯನ ಬರ್ಬರ ಹತ್ಯೆ

ದೇವಸ್ಥಾನ ಮುಂಭಾಗ ಕೋಲಾರ ನಗರಸಭೆ ಸದಸ್ಯನ ಬರ್ಬರ ಹತ್ಯೆ
bengaluru , ಮಂಗಳವಾರ, 7 ಜೂನ್ 2022 (15:03 IST)
ಕೋಲಾರ ಜಿಲ್ಲೆಯ ಮುಳಬಾಗಿಲು ನಗರದ ಮುತ್ಯಾಲಪೇಟೆಯಲ್ಲಿರುವ ಗಂಗಮ್ಮ ದೇವಾಲಯದ ಮುಂಭಾಗ ಮನೆ ಸಮೀಪ ನಗರಸಭೆ ಸದಸ್ಯನೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಮುಳಬಾಗಿಲು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ಅವರನ್ನು ಕೊಲೆ ಮಾಡಲಾಗಿದ್ದು, ಜಗನ್ ಅವರನ್ನು ಸಂಚು ಹಾಕಿ ಇಂದು ಬೆಳಗಿನ ಜಾವ 5 ಗಂಟೆ ಸುಮಾರಿಗೆ ಮನೆ ಎದುರು ಮಾರಾಕಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.
ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಅವರ ಬಲಗೈ ಬಂಟ ಮತ್ತು ಆಪ್ತನಾಗಿದ್ದ ಇವರನ್ನು ಮುಂಜಾನೆ ನಾಲ್ಕು ಜನರ ತಂಡ ಲಾಂಗು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದ್ದು, ಇತ್ತೀಚೆಗೆ ಹಾಸನದಲ್ಲಿ ನಡೆದ ಹತ್ಯೆ ನಂತರ ರಾಜ್ಯದಲ್ಲಿ ನಡೆದ ಎರಡನೇ ನಗರಸಭಾ ಸದಸ್ಯನ ಹತ್ಯೆ ಘಟನೆ ಇದಾಗಿದೆ.
ಸ್ಥಳಕ್ಕೆ ಮುಳಬಾಗಿಲು ಡಿವೈಎಸ್‍ಪಿ ಗೌರಿಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಳಬಾಗಲು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ ಪುಂಡು, ಪೋಕರಿಗಳಂತೆ ಮಾತನಾಡುತ್ತಿದ್ದಾರೆ: ಶೆಟ್ಟರ್‌