Select Your Language

Notifications

webdunia
webdunia
webdunia
webdunia

ಅತ್ಯಾಚಾರ ಸಂತ್ರಸ್ತೆಯ ಫೋಟೊ ಹರಿಬಿಟ್ಟ ಬಿಜೆಪಿ ಶಾಸಕ: ಪ್ರಕರಣ ದಾಖಲು!

ಅತ್ಯಾಚಾರ ಸಂತ್ರಸ್ತೆಯ ಫೋಟೊ ಹರಿಬಿಟ್ಟ ಬಿಜೆಪಿ ಶಾಸಕ: ಪ್ರಕರಣ ದಾಖಲು!
bengaluru , ಮಂಗಳವಾರ, 7 ಜೂನ್ 2022 (14:29 IST)
ಅಪ್ರಾಪ್ತೆಯ ಅತ್ಯಾಚಾರ ಸಂತ್ರಸ್ತೆಯ ಫೋಟೊ ಹಾಗೂ ವೀಡಿಯೊವನ್ನು ಸಾಕ್ಷ್ಯ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಹೈದರಾಬಾದ್‌ ನ ಬಿಜೆಪಿ ಶಾಸಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಎಐಎಂಐಎಂ ಶಾಸಕನ ಪುತ್ರ ಈ ಪ್ರಕರಣದ ಹಿಂದೆ ಇದ್ದಾನೆ ಎಂದು ಆರೋಪಿಸಿದ್ದು, ಇದಕ್ಕೆ ಸಂಬಂಧಿಸಿ ಸಾಕ್ಷ್ಯ ಇಲ್ಲಿದೆ ನೋಡಿ ಎಂದು ಸಂತ್ರಸ್ತೆ ೧೭ ವರ್ಷದ ಬಾಲಕಿಯ ಫೋಟೊ ಮತ್ತು ವೀಡಿಯೋವನ್ನು ಬಿಜೆಪಿ ಶಾಸಕ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದರು.
ಪ್ರಕರಣದ ತನಿಖೆ ನಡೆಯುತ್ತಿರುವ ಹಂತದಲ್ಲಿ ಬಿಜೆಪಿ ಶಾಸಕ ಈ ರೀತಿ ಸಂತ್ರಸ್ತೆಯ ಫೋಟೊ ಬಿಡುಗಡೆ ಮಾಡಿರುವುದು ಅಪರಾಧವಾಗಿದೆ. ಈ ನಿಟ್ಟಿನಲ್ಲಿ ಜುಬಿಲಿಹಿಲ್ಸ್‌ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಭುದ್ಧ ರಾಜಕಾರಣಿ ಅಲ್ಲ: ಸಿದ್ದರಾಮಯ್ಯ