Select Your Language

Notifications

webdunia
webdunia
webdunia
webdunia

ಬೆಂಗಳೂರಿನಲ್ಲಿ ಹಿಜ್ಬುಲ್‌ ಮುಜಾಹಿದ್ದೀನ್ ಉಗ್ರನ ಬಂಧನ; ಜಮ್ಮು ಕಾಶ್ಮೀರದಲ್ಲಿ ಹಿಂದೂಗಳ ಹತ್ಯೆ!

terroist arrest bengaluru ಉಗ್ರ ಬಂಧನ ಬೆಂಗಳೂರು ಕರ್ನಾಟಕ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹಿಜ್ಬುಲ್‌ ಮುಜಾಹಿದ್ದೀನ್‌ ಕಮಾಂಡರ್ ತಾಲಿಬ್ ಹುಸೇನ್‌ ನನ್ನು ಬಂಧಿಸಲಾಗಿದ್ದು, ಹಲವಾರು ಮಹತ್ವದ ಮಾಹಿತಿಗಳು ಒಂದೊಂದಾಗಿ ಹೊರಗೆ ಬರುತ್ತಿವೆ.
ಜಮ್ಮು ಕಾಶ್ಮೀರ ಪೊಲೀಸರು ಬೆಂಗಳೂರಿನ ಶ್ರೀರಾಮಪುರದಲ್ಲಿ ತಾಲಿಬ್ ಹುಸೇನ್ ನನ್ನು ಬಂಧಿಸಿದ್ದು, ಕಳೆದ 6 ವರ್ಷದ ಹಿಂದೆ ಹಿಜ್ಬುಲ್ ಸಂಘಟನೆಯ ಕಾರ್ಯಕರ್ತನಾಗಿದ್ದ. ಹಿಜ್ಬುಲ್ ಸಂಘಟನೆಯ ಕೈವಾಡವಿದೆ ಎನ್ನಲಾಗಿದೆ.
 ಕಾಶ್ಮೀರದಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ಹತ್ಯೆಗೈದಿದ್ದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಪೊಲೀಸರ ಸಹಾಯ ಪಡೆದ ಜಮ್ಮು – ಕಾಶ್ಮೀರದ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಈ ಬಗ್ಗೆ ಜಮ್ಮು- ಕಾಶ್ಮೀರದ ಐಜಿಪಿ ಅವರು ಹಿಜ್ಬುಲ್ ಸಂಘಟನೆಯಲ್ಲಿ ಇರುವುದನ್ನು ಸ್ಪಷ್ಟನೆ ನೀಡಿದ್ದಾರೆ.
ಜಮ್ಮು ಕಾಶ್ಮೀರದ ನಿವಾಸಿಯಾಗಿದ್ದ ಶಂಕಿತ ಉಗ್ರ ತಾಲಿಬ್ ಹುಸೇನ್ ಕಳೆದ 6 ವರ್ಷಗಳಿಂದ ಬೆಂಗಳೂರಿನ ಶ್ರೀರಾಮಪುರ ಮಸೀದಿ ಬಳಿ ವಾಸವಾಗಿದ್ದ.  ಈತನಿಗೆ ನಿಷೇಧಿತ ಉಗ್ರ ಸಂಘಟನೆಯೊಂದಿಗೆ ಲಿಂಕ್ ಇರುವ ಹಿನ್ನೆಲೆಯಲ್ಲಿ ಜಮ್ಮು ಪೊಲೀಸರ ಮತ್ತು ಭದ್ರತಾ ಪಡೆಗಳ ಜಂಟಿ ಕಾರ್ಯಾಚರಣೆ ನಡೆಸಿ ತಾಲಿಬ್ ಹುಸೇನ್‍ನನ್ನು ಕಳೆದ ಭಾನುವಾರ ಬಂಧಿಸಿದ್ದರು. ಆ ವೇಳೆ ಹುಸೇನ್ ನಗರದಲ್ಲಿ ಲೋಡಿಂಗ್ ಅನ್ ಲೋಡಿಂಗ್ ಕೆಲಸ ಮಾಡುತ್ತಿದ್ದಾಗಿ ಹೇಳಿಕೊಂಡಿದ್ದ.

Share this Story:

Follow Webdunia kannada

ಮುಂದಿನ ಸುದ್ದಿ

ಆಮ್‌ ಆದ್ಮಿ ಸೇರಿದ ಮುಖ್ಯಮಂತ್ರಿ ಚಂದ್ರು