Publish Date: Tue, 15 Dec 2020 (07:01 IST)
Updated Date: Tue, 15 Dec 2020 (07:10 IST)
ಚಂಡೀಗರ್ : ಮನೆಯಲ್ಲಿಯೇ 17 ವರ್ಷದ ಹುಡುಗಿಯನ್ನು ಆಕೆಯ ಇಬ್ಬರು ಸಂಬಂಧಿಕರು ಸೇರಿ ಮಾನಭಂಗ ಎಸಗಿ ಕೊಲೆ ಮಾಡಿ ನೇಣು ಬಿಗಿದು ಆತ್ಮಹತ್ಯೆ ಎಂದು ಸಾಬೀತುಮಾಡಲು ಹೊರಟ ಘಟನೆ ಹರಿಯಾಣದ ಸಿರ್ಸಾ ಜಿಲ್ಲೆಯಲ್ಲಿ ನಡೆದಿದೆ.
ಮನೆಯಲ್ಲಿ ಪೋಷಕರು ಹಾಗೂ ಸಹೋದರ ಹೊರಗೆ ಹೋಗಿದಾಗ ವಾಶ್ ರೂಂ ಬಳಸುವ ನೆಪದಲ್ಲಿ ಮನೆಗೆ ಬಂದ ಸಂಬಂಧಿಕರಿಬ್ಬರು ಮನೆಯಲ್ಲಿ ಒಂಟಿಯಾಗುರುವ ಹುಡುಗಿಯ ಮೇಲೆ ಮಾನಭಂಗ ಎಸಗಿ ಕೊಲೆ ಮಾಡಿದ್ದಾರೆ. ಬಳಿಕ ಅದನ್ನು ಆತ್ಮಹತ್ಯೆಯಂದು ಸಾಬೀತುಪಡಿಸಲು ಫ್ಯಾನ್ ಗೆ ನೇಣು ಬಿಗಿದಿದ್ದಾರೆ.
ಈ ಬಗ್ಗೆ ತಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.