Publish Date: Tue, 08 Dec 2020 (07:16 IST)
Updated Date: Tue, 08 Dec 2020 (07:18 IST)
ಚೆನ್ನೈ : ವಿವಾಹಿತ ಗೆಳೆಯ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ ಹಿನ್ನಲೆಯಲ್ಲಿ 24 ವರ್ಷದ ಯುವತಿಯೊಬ್ಬಳು ಜೀವ ಕಳೆದುಕೊಂಡ ಘಟನೆ ಚೆನ್ನೈನಲ್ಲಿ ನಡೆದಿದೆ.
ಗೆಳೆಯ ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿದ್ದು, ಮೃತಳು ಖಾಸಗಿ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಳು, ಇಬ್ಬರು ವಿಡಿಯೋ ಚಾಟ್ ಆ್ಯಪ್ ಮೂಲಕ ಪರಿಚಯರಾಗಿದ್ದಾರೆ. ಬಳಿಕ ಪರಿಚಯ ಪ್ರೀತಿಗೆ ತಿರುಗಿದೆ. ಇಬ್ಬರು ಭೇಟಿಯಾದಾಗ ಗೆಳೆಯನಿಗೆ ಮದುವೆಯಾಗಿ ಮಕ್ಕಳಿರುವುದು ತಿಳಿದುಬಂದಿದೆ. ಇದರಿಂದ ಬೇಸರಗೊಂಡ ಯುವತಿ ಆತನ ಜೊತೆಗಿನ ಸಂಬಂಧ ಕಳೆದುಕೊಳ್ಳಲು ನಿರ್ಧರಿಸಿದ್ದಾಳೆ. ಆದರೆ ಆತ ಹೀಗೆ ಮಾಡಿದರೆ ತಾನೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದ ನೋಂದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿ ಗೆಳೆಯನನ್ನು ಬಂಧಿಸಿದ್ದಾರೆ.