Publish Date: Tue, 08 Dec 2020 (07:19 IST)
Updated Date: Tue, 08 Dec 2020 (07:20 IST)
ಚೆನ್ನೈ : ಇಬ್ಬರು ಪುತ್ರರು 56 ವರ್ಷದ ತಾಯಿಯ ಮೇಲೆ ಹಲ್ಲೆ ಮಾಡಿದ ಹಿನ್ನಲೆಯಲ್ಲಿ ಮನನೊಂದ ತಾಯಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡಿನ ಟುಟಿಕೋರಿನ್ ನಲ್ಲಿ ನಡೆದಿದೆ.
ಮಹಿಳೆ ಇಬ್ಬರು ಪುತ್ರರಿದ್ದು, ಆಸ್ತಿಯನ್ನು ತಮ್ಮಿಬ್ಬರಿಗೆ ಹಂಚುವಂತೆ ಮಹಿಳೆಗೆ ಒತ್ತಾಯಿಸುತ್ತಿದ್ದರು. ಆದರೆ ಮಹಿಳೆ ತಂದೆ ಬದುಕಿರುವ ತನಕ ಆಸ್ತಿ ಹಂಚುವುದಿಲ್ಲ ಎಂದು ತಿಳಿಸಿದ್ದಾಳೆ. ಇದರಿಂದ ಕೋಪಗೊಂಡ ಪುತ್ರರು ಕಬ್ಬಿಣದ ರಾಡ್ ನಿಂದ ತಾಯಿಗೆ ಹೊಡೆದಿದ್ದಾರೆ. ಇದರಿಂದ ಬೇಸರಗೊಂಡ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆ ಮಾಡಿದ ಇಬ್ಬರು ಪುತ್ರರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.