Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿ ಕುಲ, ಗೋತ್ರ ಬಹಿರಂಗಪಡಿಸಿದ ಪುರೋಹಿತ

ರಾಹುಲ್ ಗಾಂಧಿ ಕುಲ, ಗೋತ್ರ ಬಹಿರಂಗಪಡಿಸಿದ ಪುರೋಹಿತ
ನವದೆಹಲಿ , ಮಂಗಳವಾರ, 27 ನವೆಂಬರ್ 2018 (10:12 IST)
ನವದೆಹಲಿ: ರಾಹುಲ್ ಗಾಂಧಿ ಜನಿವಾರಧಾರಿ ಬ್ರಾಹ್ಮಣ ಎಂಬ ವಿಚಾರವನ್ನು ಲೇವಡಿ ಮಾಡುವ ಬಿಜೆಪಿಗೆ ರಾಜಸ್ಥಾನದ ಪುಷ್ಕರ್ ನ ಪುರೋಹಿತರೊಬ್ಬರು ರಾಹುಲ್ ಕುಲ, ಗೋತ್ರ ಹೇಳುವ ಮೂಲಕ ಉತ್ತರ ನೀಡಿದ್ದಾರೆ.

ರಾಜಸ್ಥಾನ ಚುನಾವಣಾ ರ್ಯಾಲಿ ನಡುವೆ ರಾಹುಲ್ ಅಜ್ಮೀರ್ ದರ್ಗಾ ಮತ್ತು ಪುಷ್ಕರ್ ಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಇದಾದ ಬಳಿಕ ಪುಷ್ಕರ್ ನ ಪುರೋಹಿತರೊಬ್ಬರು ರಾಹುಲ್ ಗಾಂಧಿ ಗೋತ್ರ ದತ್ತಾತ್ರೇಯ. ದತ್ತಾತ್ರೇಯ ಗೋತ್ರದವರ ಕುಲನಾಮ ಕೌಲ್ ಎಂದು ಆಗುತ್ತದೆ. ಕೌಲ್ ಎಂದರೆ ಕಾಶ್ಮೀರಿ ಬ್ರಾಹ್ಮಣ ಎಂದು ಪ್ರತಿಪಾದಿಸಿದ್ದಾರೆ.

ರಾಹುಲ್ ಪೂಜೆ ಸಲ್ಲಿಸುವಾಗ ತಮ್ಮ ಗೋತ್ರ ದತ್ತಾತ್ರೇಯ ಎಂದಿದ್ದರು ಎಂದು ಆ ಪುರೋಹಿತರು ಹೇಳಿಕೊಂಡಿದ್ದಾರೆ. ಈ ಮೂಲಕ ರಾಹುಲ್ ಬ್ರಾಹ್ಮಣ ಎಂದು ಅವರು ಪ್ರತಿಪಾದಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಅಂಬರೀಶ್ ಸಾವಿಗೂ ಮುನ್ನ ಆ ಕೊನೆಯ ಕ್ಷಣದಲ್ಲಿ ಏನಾಗಿತ್ತು ಗೊತ್ತಾ?