Publish Date: Mon, 26 Nov 2018 (08:35 IST)
Updated Date: Mon, 26 Nov 2018 (08:37 IST)
ನವದೆಹಲಿ: ಮೊನ್ನೆಯಷ್ಟೇ ಚುನಾವಣಾ ರ್ಯಾಲಿಯೊಂದರಲ್ಲಿ ಕಾಂಗ್ರೆಸ್ ನಾಯಕ ರಾಜ್ ಬಬ್ಬರ್ ಪ್ರಧಾನಿ ಮೋದಿ ತಾಯಿಯ ವಯಸ್ಸಿನ ಬಗ್ಗೆ ಉಲ್ಲೇಖಿಸಿ ಅವಹೇಳನ ಮಾಡಿದ್ದರು. ಇದೀಗ ಮತ್ತೆ ಕಾಂಗ್ರೆಸ್ ಮೋದಿ ತಂದೆಯ ಬಗ್ಗೆ ಪ್ರಶ್ನಿಸಿ ವಿವಾದವೆಬ್ಬಿಸಿದೆ.
ಯಾರಿಗೂ ಮೋದಿ ತಂದೆ ಬಗ್ಗೆ ಗೊತ್ತಿಲ್ಲ. ಆದರೆ ಎಲ್ಲರಿಗೂ ರಾಹುಲ್ ಗಾಂಧಿಯವರ ಐದು ತಲೆಮಾರುಗಳ ಬಗ್ಗೆ ಗೊತ್ತಿದೆ ಎಂದು ಕಾಂಗ್ರೆಸ್ ನಾಯಕ ವಿಲಾಸ್ ರಾವ್ ಮುತ್ತೇಮ್ವಾರ್ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.
ಚುನಾವಣೆ ರ್ಯಾಲಿಯಲ್ಲಿ ಪ್ರಧಾನಿ ಮೋದಿಯ ವೈಯಕ್ತಿಕ ವಿಚಾರಗಳ ಬಗ್ಗೆ ಕೆದಕಿ ಟೀಕೆ ಮಾಡುತ್ತಿರುವುದು ಬಿಜೆಪಿ ಆಕ್ರೋಶಕ್ಕೆ ಕಾರಣವಾಗಿದೆ. ರಾಹುಲ್ ಗಾಂಧಿ ಅಪ್ಪ ಯಾರು ಎಂಬುದು ಇಡೀ ಜಗತ್ತಿಗೇ ಗೊತ್ತು, ಆದರೆ ಮೋದಿ ತಂದೆ ಯಾರು ಎಂಬುದು ಯಾರಿಗಾದರೂ ಗೊತ್ತಾ ಎಂದು ವಿಲಾಸ್ ರಾವ್ ಹೇಳುವ ವಿಡಿಯೋ ಒಂದು ಈಗ ಅಂತರ್ಜಾಲದಲ್ಲಿ ಹರಿದಾಡುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.