Publish Date: Mon, 26 Nov 2018 (08:31 IST)
Updated Date: Mon, 26 Nov 2018 (08:33 IST)
ಬೆಂಗಳೂರು: ಹಿರಿಯ ನಟ ಅಂಬರೀಷ್ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ನಿನ್ನೆಯಿಂದ ಇಂದು ಬೆಳಿಗ್ಗೆ ಮಂಡ್ಯದಲ್ಲಿ ಅವಕಾಶ ಕಲ್ಪಿಸಿದಾಗಿನಿಂದಲೂ ಸಿಎಂ ಕುಮಾರಸ್ವಾಮಿ ಇಲ್ಲಿಯೇ ಮೊಕ್ಕಾಂ ಹೂಡಿದ್ದಾರೆ.
ಅಂಬಿ ಪಾರ್ಥಿವ ಶರೀರ ಹೊತ್ತ ಸೇನಾ ಹೆಲಿಕಾಪ್ಟರ್ ನಲ್ಲಿಯೇ ಸಾಗಿದ ಸಿಎಂ ಕುಮಾರಸ್ವಾಮಿ ರಾತ್ರಿ ಕೆಲ ಸಮಯ ಅಂಬಿ ಕುಟುಂಬದವರ ಜತೆ ಅಲ್ಲಿಯೇ ಇದ್ದರು. ಬಳಿಕ ಕೆಆರ್ ಎಸ್ ಬಳಿ ತಂಗಿದ್ದರು.
ಇಂದು ಬೆಳಿಗ್ಗೆ ಅಂಬರೀಷ್ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ಕರೆತರುವ ಹೆಲಿಕಾಪ್ಟರ್ ನಲ್ಲಿಯೇ ಮತ್ತೆ ಬೆಂಗಳೂರಿನತ್ತ ಪ್ರಯಾಣಿಸಲಿರುವ ಅವರು ಬಳಿಕ ಅಂತಿಮ ಕ್ರಿಯೆಯಲ್ಲೂ ಪಾಲ್ಗೊಳ್ಳುತ್ತಿದ್ದಾರೆ. ಈ ಮೂಲಕ ಆರಂಭದಿಂದ ಕೊನೆಯವರೆಗೂ ಅಂಬಿ ಕುಟುಂಬದ ದುಃಖದಲ್ಲಿ ಭಾಗಿಯಾಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.