Select Your Language

Notifications

webdunia
webdunia
webdunia
Thursday, 10 April 2025
webdunia

ಅಂಬರೀಶ್ ನಿಧನದ ಹಿನ್ನಲೆ; ಕನಕದಾಸ ಜಯಂತಿ ಆಚರಣೆ ಮುಂದೂಡಿಕೆ

ಬೆಂಗಳೂರು
ಬೆಂಗಳೂರು , ಸೋಮವಾರ, 26 ನವೆಂಬರ್ 2018 (07:24 IST)
ಬೆಂಗಳೂರು : ಸ್ಯಾಂಡಲ್ ವುಡ್  ಹಿರಿಯ ನಟ ಅಂಬರೀಶ್ ನಿಧರಾದ ಹಿನ್ನಲೆಯಲ್ಲಿ ಇಂದು ನಡೆಯಬೇಕಾಗಿದ್ದ ಕನಕದಾಸ ಜಯಂತಿಯನ್ನು ಮುಂದೂಡಲಾಗಿದೆ.


ಕನ್ನಡದ ಹಿರಿಯ ನಟ, ರಾಜಕಾರಣಿ ಅಂಬರೀಶ್ ಅವರು ಶನಿವಾರ ನಿಧನರಾದ ಕಾರಣ ಇಡೀ ರಾಜ್ಯವೇ ಶೋಕಾಚರಣೆಯಲ್ಲಿ ಮುಳುಗಿದೆ. ಅಂಬರೀಶ್ ಅವರ ಗೌರವಾರ್ಥವಾಗಿ ರಾಜ್ಯಾದ್ಯಂತ ಮೂರು ದಿನಗಳ ಕಾಲ ಶೋಕಾಚರಣೆ ಆಚರಿಸಲು ಆದೇಶ ಹೊಡಿಸಲಾಗಿದೆ.


ಆದ್ದರಿಂದ ಇಂದು ಆಚರಿಸಬೇಕಾದ  ಕನಕದಾಸ ಜಯಂತಿಯನ್ನು ಮುಂದೂಡಿ ಜಿಲ್ಲಾಡಳಿತ ಮತ್ತೊಂದು ದಿನಾಂಕವನ್ನು ನಿಗದಿಪಡಿಸಿಕೊಂಡು ಆಚರಿಸುವಂತೆ ರಾಜ್ಯ ಸರಕಾರ ಅಧಿಕೃತ ಆದೇಶವನ್ನು ಹೊರಡಿಸಿದೆ. ಇನ್ನೂ ಕನಕ ಜಯಂತಿ ಪ್ರಯಕ್ತ ಘೋಷಣೆಯಾಗಿದ್ದ ಸರಕಾರಿ ರಜೆ ಇರುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

Share this Story:

Follow Webdunia kannada

ಮುಂದಿನ ಸುದ್ದಿ

ಅಂಬಿ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ಹೀಗಿದೆ?