Publish Date: Sun, 25 Nov 2018 (18:55 IST)
Updated Date: Sun, 25 Nov 2018 (18:57 IST)
ರೆಬಲ್ ಸ್ಟಾರ್ ಅಂಬರೀಶ್ ನಿಧನದ ಹಿನ್ನೆಲೆಯಲ್ಲಿ ಆನೇಕಲ್ ತಾಲ್ಲೂಕಿನಲ್ಲಿ ಸೂತಕದ ಛಾಯೆ ಆವರಿಸಿದೆ. ಅಂಬಿ ಅಭಿಮಾನಿಗಳು ಆನೇಕಲ್ ನಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದ ರಾಘವೇಂದ್ರ ವೃತ್ತದಲ್ಲಿ ಕನ್ನಡದ ಅಭಿಮಾನಿಗಳಿಂದ ಅಗಲಿದ ಹಿರಿಯ ನಟ ಅಂಬರೀಶ್ ಗೆ ಶ್ರದ್ಧಾಂಜಲಿ ಸಲ್ಲಿಕೆ ಮಾಡಲಾಯಿತು.
ನಟ ಅಂಬರೀಶ್ ಪೋಟೋ ಇಟ್ಟು ಹೂವನ್ನು ಹಾಕುವ ಮೂಲಕ ಶ್ರದ್ಧಾಂಜಲಿಯನ್ನು ಅಭಿಮಾನಿಗಳು ಸಲ್ಲಿಸಿದರು.
ಮೌನ ಆಚರಣೆ ಮಾಡುವ ಮೂಲಕ ಕಲಿಯುಗ ಕರ್ಣನ ಸಾವಿಗೆ ಸಂತಾಪ ಸೂಚಿಸಿದ ಅಭಿಮಾನಿಗಳು, ನೆಚ್ಚಿನ ನಟನನ್ನು ನೆನೆದು ಕಂಬನಿ ಮಿಡಿದರು.