ಮಾಜಿ ಸಚಿವ ಜನಪ್ರಿಯ ನಟ ಶ್ರೀ ಅಂಬರೀಷ್ ಅವರ ನಿಧನಕ್ಕೆ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಸಚಿವರಾಗಿ ಅಂಬರೀಷ್ ಸೇವೆ ಸಲ್ಲಿಸಿ ಜನ ಸಾಮಾನ್ಯರ ಸಂಕಷ್ಟಗಳಿಗೆ ನೆರವಾಗಿದ್ದರು. ವರ್ಣರಂಜಿತ ಚಲನಚಿತ್ರ ನಾಯಕರಾಗಿ ವಿಭಿನ್ನ ಪಾತ್ರಗಳಲ್ಲಿ ವಿಶಿಷ್ಟ ಅಭಿನಯ ನೀಡಿದ್ದರು.
ಅಂಬರೀಷ್ ಅವರ ನಿಧನದಿಂದ ರಾಜಕೀಯ ಕ್ಷೇತ್ರ ಹಾಗೂ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಪ್ರಿಯಾಂಕ್ ಖರ್ಗೆ ಕಂಬನಿ ಮಿಡಿದಿದ್ದಾರೆ.