Publish Date: Sun, 25 Nov 2018 (18:05 IST)
Updated Date: Sun, 25 Nov 2018 (18:07 IST)
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮಂಡ್ಯದ ಗಂಡಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಕೆ ಮಾಡಲಾಯಿತು.
ಹುಬ್ಬಳ್ಳಿ ನಗರದ ಚನ್ನಮ್ಮ ವೃತ್ತದಲ್ಲಿ ಶ್ರದ್ಧಾಂಜಲಿ ಸಲ್ಲಿಕೆ ಮಾಡಲಾಯಿತು. ಆಟೋ ಚಾಲಕರ ಮತ್ತು ಮಾಲೀಕರ ಸಂಘದಿಂದ ಅಗಲಿದ ಹಿರಿಯ ಚಿತ್ರನಟ ಅಂಬರೀಶ್ ಗೆ ಶ್ರದ್ಧಾಂಜಲಿ ಸಮರ್ಪಣೆ ಮಾಡಲಾಯಿತು.
ಅಂಬಿ ಕಟೌಟ್ ಗೆ ಪುಷ್ಪ ಸಮರ್ಪಿಸುವ ಮೂಲಕ ಶೋಕಾಚರಣೆಯನ್ನು ಜನರು ಮಾಡಿದರು. ಅಗಲಿದ ಚೇತನದ ಆತ್ಮಕ್ಕೆ ಶಾಂತಿ ಕೋರಿದ ಆಟೋ ಚಾಲಕರು, ಕಂಬನಿ ಮಿಡಿದರು. 'ಅಂಬಿ ಮತ್ತೆ ಹುಟ್ಟಿ ಬಾ' ಎಂಬ ಘೋಷಣೆ ಮೊಳಗಿಸಿದರು.