Select Your Language

Notifications

webdunia
webdunia
webdunia
Tuesday, 15 April 2025
webdunia

ಅಂಬರೀಶ್ ನಿಧನಕ್ಕೆ ರಂಭಾಪುರಿ ಶ್ರೀ ಸಂತಾಪ

ಅಂಬರೀಶ್
ಚಿಕ್ಕಮಗಳೂರು , ಭಾನುವಾರ, 25 ನವೆಂಬರ್ 2018 (18:49 IST)
ಚಲನಚಿತ್ರ ನಟ ಅಂಬರೀಶ್ ನಿಧನಕ್ಕೆ ಬಾಳೆಹೊನ್ನುರು ರಂಭಾಪುರಿ ಶ್ರೀ ಸಂತಾಪ ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನುರಿನ ರಂಭಾಪುರಿ ಪೀಠದಲ್ಲಿ ರಂಭಾಪುರಿ ಶ್ರೀ ಹೇಳಿಕೆ ನೀಡಿದ್ದು, ಅಂಬರೀಶ್ ರವರು ಚಿತ್ರರಂಗದ ಮೂಲಕ ಈ ನಾಡಿಗೆ ತಮ್ಮದೇ ಕೊಡುಗೆ ನೀಡಿದ್ದಾರೆ. ರಾಜಕೀಯವಾಗಿ ಬೆಳೆದು ಕೇಂದ್ರ, ರಾಜ್ಯ ಸಚಿವರಾಗಿ ಹಾಗೂ ಶಾಸಕರಾಗಿ ಉತ್ತಮ ಕೆಲಸ ಮಾಡಿದ್ದಾರೆ.

ಅಂಬರೀಶ್ ಈ ರಾಜ್ಯಕ್ಕೆ ಅಜಾತ ಶತ್ರು ಇದ್ದ ಹಾಗೆ ಎಂದು ಸ್ಮರಿಸಿದರು. ನಟ ಅಂಬರೀಶ್ ಅವರ ಅಕಾಲಿಕ ನಿಧನದಿಂದ ಚಿತ್ರರಂಗಕ್ಕೆ ಹಾಗೂ ರಾಜಕೀಯ ರಂಗಕ್ಕೆ ನಷ್ಟ ಉಂಟಾಗಿದೆ.

ಅವರ ಅಗಲಿಕೆಯಿಂದ ಉಂಟಾದ ದುಃಖವನ್ನು ತಡೆದುಕೊಳ್ಳುವ ಶಕ್ತಿಯನ್ನು ಅವರ ಕುಟುಂಬಕ್ಕೆ ದೇವರು ನೀಡಲಿ ಎಂದು ಶ್ರೀಗಳು ಹೇಳಿದ್ದಾರೆ.

 

 

Share this Story:

Follow Webdunia kannada

ಮುಂದಿನ ಸುದ್ದಿ

ರೆಬಲ್ ಸ್ಟಾರ್ ನಿಧನಕ್ಕೆ ಶಾಸಕ ಅಜಯಸಿಂಗ್ ಸಂತಾಪ