Publish Date: Sat, 24 Nov 2018 (13:17 IST)
Updated Date: Sat, 24 Nov 2018 (13:19 IST)
ಬೆಂಗಳೂರು : ಮೈತ್ರಿ ಸರ್ಕಾರದಲ್ಲಿ ಫೋನ್ ಕದ್ದಾಲಿಕೆ ಮಾಡುತ್ತಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಫೋನ್ ಕದ್ದಾಲಿಕೆ ಬಿಜೆಪಿ ಸಂಸ್ಕೃತಿ ಎಂದು ನೆಲಮಂಗಲದಲ್ಲಿ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಫೋನ್ ಕದ್ದಾಲಿಕೆ ಕುರಿತಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಕೆಲ ದಿನಗಳ ಹಿಂದೆ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಆರೋಪ ಮಾಡಿದ್ದರು. ಹಾಗೇ ಬಿಜೆಪಿ ಮುಖಂಡ ಆರ್. ಅಶೋಕ್ ಆಪರೇಷನ್ ಕಮಲಕಕ್ಕೆ ಬ್ರೇಕ್ ಹಾಕಲು ದೋಸ್ತಿ ಸರ್ಕಾರದ ಭಾಗವಾಗಿರುವ ಜೆಡಿಎಸ್ ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಹಲವು ಬಿಜೆಪಿ ನಾಯಕರ ಹಾಗೂ ಕೆಲ ಪತ್ರಕರ್ತರ ದೂರವಾಣಿ ಕದ್ದಾಲಿಕೆ ನಡೆಸುತ್ತಿದ್ದೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಇದೀಗ ತಿರುಗೇಟು ನೀಡಿದ ಸಚಿವ ಕೃಷ್ಣ ಬೈರೇಗೌಡ ,’ಬಿಜೆಪಿಯವರಿಗೆ ಇಂತ ಚೇಷ್ಟೆಗಳನ್ನು ಮಾಡಿ ಅಭ್ಯಾಸ ಆಗಿದೆ. ವಾಮಮಾರ್ಗದ ಮೂಲಕ ಶಾಸಕರನ್ನು ಹಾರಿಸಿಕೊಂಡು ಹೋಗುವುದು ಬಿಜೆಪಿಯವರ ಸಂಪ್ರದಾಯ. ಇದು ಬಿಜೆಪಿಯವರ ಹುಟ್ಟುಗುಣ, ಇದೆಲ್ಲಾ ರಕ್ತಗತವಾಗಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.