ರಾಂಚಿ: 2011 ರ ವಿಶ್ವಕಪ್ ಫೈನಲ್ ಗೆಲುವನ್ನು ಯಾವ ಕ್ರಿಕೆಟ್ ಪ್ರಿಯ ತಾನೇ ಮರೆಯಲು ಸಾಧ್ಯ? ಅಂದು ಗೆಲುವಿಗೆ ಕಾರಣವಾಗಿದ್ದು ಗೌತಮ್ ಗಂಭೀರ್ ಜತೆಗೆ ಸ್ವತಃ ನಾಯಕ ಧೋನಿ ಬ್ಯಾಟಿಂಗ್.
ಆ ಪಂದ್ಯದಲ್ಲಿ ಫಾರ್ಮ್ ನಲ್ಲಿದ್ದ ಯುವರಾಜ್ ಸಿಂಗ್ ರನ್ನು ಕೆಳ ಕ್ರಮಾಂಕಕ್ಕೆ ತಳ್ಳಿ ತಾವು ಆ ಮೇಲಿನ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದೇಕೆ ಎಂಬುದನ್ನು ಧೋನಿ ಇದೀಗ ಬಹಿರಂಗಪಡಿಸಿದ್ದಾರೆ.
‘ಯಾಕೆಂದರೆ ಶ್ರೀಲಂಕಾ ತಂಡದಲ್ಲಿ ಹೆಚ್ಚಿನವರು ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದವರು. ಆ ಸಂದರ್ಭದಲ್ಲಿ ಮುತ್ತಯ್ಯ ಮುರಳೀಧರನ್ ಬೌಲಿಂಗ್ ಮಾಡುತ್ತಿದ್ದರು. ಸಿಎಸ್ ಕೆ ನೆಟ್ಸ್ ನಲ್ಲಿ ನಾನು ಹಲವು ಬಾರಿ ಮುರಳಿ ಬೌಲಿಂಗ್ ಎದುರಿಸಿದ್ದೆ. ಹಾಗಾಗಿ ಅವರ ಬೌಲಿಂಗ್ ನ್ನು ಎದುರಿಸುವುದು ಹೇಗೆ ಎಂದು ನನಗೆ ಚೆನ್ನಾಗಿ ಗೊತ್ತಿತ್ತು. ಅದೇ ಆತ್ಮವಿಶ್ವಾಸದಲ್ಲಿ ಯುವರಾಜ್ ಸಿಂಗ್ ಗಿಂತ ಮೊದಲು ನಾನೇ ಬ್ಯಾಟಿಂಗ್ ಗಿಳಿದೆ’ ಎಂದು ಧೋನಿ ಬಹಿರಂಗಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.