ವಿಕಲಚೇತನ ಅಭಿಮಾನಿಯೊಂದಿಗೆ ಧೋನಿ ನಡೆದುಕೊಂಡ ರೀತಿಗೆ ಬೌಲ್ಡ್ ಆದ ಅಭಿಮಾನಿಗಳು!

ಶನಿವಾರ, 3 ನವೆಂಬರ್ 2018 (08:39 IST)
ತಿರುವನಂತಪುರಂ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ತಿರುವನಂತಪುರಂನಲ್ಲಿ ನಡೆದ ಅಂತಿಮ ಏಕದಿನ ಪಂದ್ಯದಲ್ಲಿ ಧೋನಿ ಆಟದ ಮೂಲಕ ಸದ್ದು ಮಾಡದಿದ್ದರೂ ತಮ್ಮ ವರ್ತನೆಯಿಂದಲೇ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

ಅಂತಿಮ ಏಕದಿನ ಪಂದ್ಯ ನಡೆದ ತಿರುವನಂತಪುರಂನ ಮೈದಾನದ ಹೊರಗೆ ತಮಗಾಗಿ ಕಾದು ಕುಳಿತಿದ್ದ ವಿಕಲ ಚೇತನ ಅಭಿಮಾನಿಯನ್ನು ಭೇಟಿ ಮಾಡಿದ ಧೋನಿ ಸೀದಾ ಹೋಗಿ ಕೈಕುಲುಕಿದ್ದಲ್ಲದೆ, ಆತನ ಜತೆಗೆ ಕೆಲ ಕಾಲ ಮಾತುಕತೆ ನಡೆಸಿ ಫೋಟೋ ತೆಗೆಸಿಕೊಂಡರು. ಅಷ್ಟೇ ಅಲ್ಲ, ಆತನ ಆಸೆಯಂತೆ ಕೈ ಮೇಲೆ ಚುಂಬಿಸಲು ಅವಕಾಶ ಕೊಟ್ಟರು.

ಧೋನಿ ಅಭಿಮಾನಿಯೊಂದಿಗೆ ನಡೆದುಕೊಂಡ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕ್ಯಾಪ್ಟನ್ ಕೂಲ್ ನಡೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಹರ್ಭಜನ್ ಸಿಂಗ್ ಜನಾಂಗೀಯ ನಿಂದನೆ ಮಾಡಿದ ಮೇಲೆ ತನ್ನ ಜೀವನವೇ ಹಾಳಾಯಿತು ಎಂದ ಆಸೀಸ್ ಕ್ರಿಕೆಟಿಗ