Select Your Language

Notifications

webdunia
webdunia
webdunia
webdunia

ಹರ್ಭಜನ್ ಸಿಂಗ್ ಜನಾಂಗೀಯ ನಿಂದನೆ ಮಾಡಿದ ಮೇಲೆ ತನ್ನ ಜೀವನವೇ ಹಾಳಾಯಿತು ಎಂದ ಆಸೀಸ್ ಕ್ರಿಕೆಟಿಗ

ಹರ್ಭಜನ್ ಸಿಂಗ್ ಜನಾಂಗೀಯ ನಿಂದನೆ ಮಾಡಿದ ಮೇಲೆ ತನ್ನ ಜೀವನವೇ ಹಾಳಾಯಿತು ಎಂದ ಆಸೀಸ್ ಕ್ರಿಕೆಟಿಗ
ಮುಂಬೈ , ಶನಿವಾರ, 3 ನವೆಂಬರ್ 2018 (08:36 IST)
ಮುಂಬೈ: 2008 ರ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಹರ್ಭಜನ್ ಸಿಂಗ್ ಮತ್ತು ಆಂಡ್ರ್ಯೂ ಸೈಮಂಡ್ಸ್ ನಡುವೆ ನಡೆದ ಜನಾಂಗೀಯ ನಿಂದನೆ ಪ್ರಕರಣ ಕ್ರಿಕೆಟ್ ಪ್ರಿಯರ ಮನಸ್ಸಲ್ಲಿ ಅಚ್ಚಳಿಯದೇ ನಿಂತಿರುತ್ತದೆ.

ಈ ಪ್ರಕರಣ ಜಗತ್ತಿನ ಗಮನ ಸೆಳೆದಿತ್ತು. ಆಂಡ್ರ್ಯೂ ಸೈಮಂಡ್ಸ್ ರನ್ನು ಮಂಕಿ ಎಂದು ಕರೆದ ಭಜಿಗೆ ಜನಾಂಗೀಯ ನಿಂದನೆ ಮಾಡಿದ ಆರೋಪದಲ್ಲಿ ಮೂರು ಪಂದ್ಯಗಳ ನಿಷೇಧ ಹೇರಲಾಗಿತ್ತು.

ಆದರೆ ಅದಾದ ಬಳಿಕ ತನ್ನ ಜೀವನ ಮೂರಾಬಟ್ಟೆಯಾಯಿತು ಎಂದು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಸೈಮಂಡ್ಸ್ ಹೇಳಿಕೊಂಡಿದ್ದಾರೆ. ಆ ಘಟನೆ ಬಳಿಕ ನಾನು ಕುಡಿತದ ದಾಸನಾದೆ. ನನ್ನ ಕುಟುಂಬ ದಿಕ್ಕು ತೋಚದಂತಾಗಿತ್ತು. ನನ್ನ ವೈಯಕ್ತಿಕ, ವೃತ್ತಿ ಬದುಕು ಹಾಳಾಯಿತು ಎಂದು ಸೈಮಂಡ್ಸ್ ಹೇಳಿಕೊಂಡಿದ್ದಾರೆ.

ಆ ಬಳಿಕ ಈ ಇಬ್ಬರೂ ಕ್ರಿಕೆಟಿಗರು ಮುಂಬೈ ಇಂಡಿಯನ್ಸ್ ಪರ ಐಪಿಎಲ್ ಪಂದ್ಯಾವಳಿಯಲ್ಲಿ ಆಡಿದ್ದರು. ಆ ಸಂದರ್ಭದಲ್ಲಿ ಭಜಿ ತಮ್ಮ ಬಳಿಗೆ ಬಂದು ಕ್ಷಮೆ ಯಾಚಿಸಿದ್ದರು ಎಂದು ಸೈಮಂಡ್ಸ್ ಹೇಳಿದ್ದಾರೆ. ಸಚಿನ್ ಮಧ್ಯಸ್ಥಿಕೆಯಲ್ಲಿ ಇವರಿಬ್ಬರ ನಡುವೆ ರಾಜಿಸಂಧಾನವಾಗಿತ್ತಂತೆ. ತನ್ನ ಬಳಿಗೆ ಬಂದ ಭಜಿ ಆ ಘಟನೆಯಿಂದ ನಿನ್ನ ಕುಟುಂಬ ಜೀವನದ ಮೇಲೂ ಪರಿಣಾಮ ಬೀರಿದ್ದಕ್ಕೆ ನನಗೆ ಖೇದವಿದೆ ಎಂದು ಬೇಸರಿಸಿಕೊಂಡರಂತೆ ಭಜಿ. ಹಾಗೆ ಹೇಳಿ ಅವರು ಅವರ ಹೃದಯದ ಭಾರ ಕಡಿಮೆ ಮಾಡಿಕೊಂಡರು ಎಂದು ಸೈಮಂಡ್ಸ್ ಬಹಿರಂಗಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ರವಿಶಾಸ್ತ್ರಿ ಟೀಂ ಇಂಡಿಯಾ ಕೋಚ್ ಆಗುವುದನ್ನು ವಿರೋಧಿಸಿದ್ದ ಮತ್ತೊಬ್ಬರು ಯಾರು ಗೊತ್ತೇ?!