Publish Date: Thu, 01 Nov 2018 (15:51 IST)
Updated Date: Thu, 01 Nov 2018 (15:54 IST)
ತಿರುವನಂತಪುರಂ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಐದನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ವಿಂಡೀಸ್ ದಾಖಲೆಯ ಕನಿಷ್ಠ ಮೊತ್ತಕ್ಕೆ ಆಲೌಟ್ ಆಗಿದೆ.
ಟೀಂ ಇಂಡಿಯಾ ಬೌಲರ್ ಗಳ ಸಾಂಘಿಕ ದಾಳಿಗೆ ಕುಸಿದ ವಿಂಡೀಸ್ 31.5 ಓವರ್ ಗಳಲ್ಲಿ ಕೇವಲ 104 ಕ್ಕೆ ಆಲೌಟ್ ಆಗಿದೆ. ಇದು ಭಾರತದ ವಿರುದ್ಧ ವಿಂಡೀಸ್ ಗಳಿಸಿದ ಕನಿಷ್ಠ ಮೊತ್ತವಾಗಿದೆ.
ಭಾರತಕ್ಕೆ ಆರಂಭದಲ್ಲೇ ಬ್ರೇಕ್ ಕೊಟ್ಟಿದ್ದು ಭುವನೇಶ್ವರ್ ಕುಮಾರ್ ಮತ್ತು ಜಸ್ಪ್ರೀತ್ ಬುಮ್ರಾ. ಭುವಿ ಒಂದು ವಿಕೆಟ್ ಪಡೆದರೆ ಬುಮ್ರಾಗೆ 2 ವಿಕೆಟ್ ಸಿಕ್ಕಿತು. ಮಧ್ಯಮ ಕ್ರಮಾಂಕದಲ್ಲಿ ವಿಂಡೀಸ್ ಬೆನ್ನುಲುಬು ಮುರಿದಿದ್ದು ರವೀಂದ್ರ ಜಡೇಜಾ. ಅವರು 4 ವಿಕೆಟ್ ಕಬಳಿಸಿದರು. ಯುವ ವೇಗಿ ಖಲೀಲ್ 2 ವಿಕೆಟ್, ಕುಲದೀಪ್ ಯಾದವ್ 1 ವಿಕೆಟ್ ಪಡೆದು ವಿಂಡೀಸ್ ದಂಡುರುಳಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.