Publish Date: Thu, 01 Nov 2018 (09:00 IST)
Updated Date: Thu, 01 Nov 2018 (09:01 IST)
ತಿರುವನಂತಪುರಂ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದು ತಿರುವನಂತಪುರಂನಲ್ಲಿ ನಡೆಯಲಿರುವ ಐದನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟಾಸ್ ಗೆದ್ದರೆ ಅದುವೇ ದಾಖಲೆಯಾಗಲಿದೆ.
ಇಂಗ್ಲೆಂಡ್ ಸರಣಿಯಲ್ಲಿ ಸತತವಾಗಿ ಐದು ಬಾರಿ ಟಾಸ್ ಸೋತು ಬೇಡದ ದಾಖಲೆ ಮಾಡಿದ್ದ ಕೊಹ್ಲಿ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಪಂದ್ಯಗಳಲ್ಲಿ ಇದುವರೆಗೆ ತಾವೇ ಸತತವಾಗಿ ಟಾಸ್ ಗೆದ್ದಿದ್ದಾರೆ. ಅಂತಿಮ ಪಂದ್ಯದಲ್ಲೂ ಟಾಸ್ ಗೆದ್ದರೆ ಸರಣಿಯ ಎಲ್ಲಾ ಪಂದ್ಯಗಳಲ್ಲಿ ಟಾಸ್ ಗೆದ್ದ ದಾಖಲೆ ಮಾಡಲಿದ್ದಾರೆ.
ಆ ಮೂಲಕ ಈ ರೀತಿ ದಾಖಲೆ ಮಾಡಿದ ಮೊದಲ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಮೊದಲೇ ಕೊಹ್ಲಿ ಒಂದಾದ ಮೇಲೊಂದರಂತೆ ದಾಖಲೆ ಮಾಡುತ್ತಲೇ ಇದ್ದಾರೆ. ಅದರ ಜತೆಗೆ ಇದೊಂದು ದಾಖಲೆ ಸೇರಿಕೊಳ್ಳಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.