Publish Date: Wed, 31 Oct 2018 (09:16 IST)
Updated Date: Wed, 31 Oct 2018 (09:17 IST)
ಮುಂಬೈ: ವೆಸ್ಟ್ ಇಂಡೀಸ್ ವಿರುದ್ಧ ನಾಲ್ಕನೇ ಏಕದಿನ ಪಂದ್ಯದಲ್ಲಿ ಬ್ಯಾಟ್ ಜತೆಗೆ ಫೀಲ್ಡಿಂಗ್ ನಲ್ಲೂ ಕಮಾಲ್ ಮಾಡಿದ ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ ತಾವು ಕ್ಯಾಚಿಂಗ್ ಪ್ರಾಕ್ಟೀಸ್ ಮಾಡುತ್ತಿದ್ದಾಗ ಕೊಹ್ಲಿ ನಗುತ್ತಿದ್ದರು ಎಂದಿದ್ದಾರೆ.
ನಾಲ್ಕನೇ ಪಂದ್ಯದಲ್ಲಿ 162 ರನ್ ಸಿಡಿಸಿದ ಬಳಿಕ ಸ್ಲಿಪ್ ಸ್ಥಾನದಲ್ಲಿ ಫೀಲ್ಡಿಂಗ್ ಮಾಡಿದ ರೋಹಿತ್ ಶರ್ಮಾ ಮೂರು ಅದ್ಭುತ ಕ್ಯಾಚ್ ಹಿಡಿದು ಗಮನ ಸೆಳೆದರು. ಈ ಬಗ್ಗೆ ಮಾತನಾಡಿರುವ ಅವರು ತಾನು ಕ್ಯಾಚಿಂಗ್ ನ್ನು ತುಂಬಾ ಗಂಭೀರವಾಗಿ ಪರಿಗಣಿಸಿದ್ದೆ ಎಂದಿದ್ದಾರೆ.
‘ನಾನು ಅಭ್ಯಾಸದ ಸಂದರ್ಭದಲ್ಲಿ ಕ್ಯಾಚಿಂಗ್ ಪ್ರಾಕ್ಟೀಸ್ ಮಾಡುವಾಗ ವಿರಾಟ್ ಕೊಹ್ಲಿ ನಗುತ್ತಿದ್ದರು. ಆದರೆ ಕ್ಯಾಚ್ ಪಂದ್ಯವನ್ನೇ ಬದಲಾಯಿಸುವ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ನನಗೆ ಗೊತ್ತಿತ್ತು. ಈವತ್ತು ಕೆಲವು ಉತ್ತಮ ಕ್ಯಾಚ್ ಹಿಡಿಯಲು ಸಾಧ‍್ಯವಾಗಿದ್ದು ಒಳ್ಳೆಯದೆನಿಸಿತು’ ಎಂದು ರೋಹಿತ್ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.