Publish Date: Wed, 31 Oct 2018 (09:05 IST)
Updated Date: Wed, 31 Oct 2018 (09:07 IST)
ಮುಂಬೈ: ಮುಂಬರುವ ವಿಶ್ವಕಪ್ ಕ್ರಿಕೆಟ್ ಇಂಗ್ಲೆಂಡ್ ನಲ್ಲಿ 2019 ರಲ್ಲಿ ನಡೆಯಲಿದ್ದು, ಈ ವೇಳೆ ತಮಗೆ ಯಾವೆಲ್ಲಾ ಸೌಲಭ್ಯ ಬೇಕೆಂದು ಟೀಂ ಇಂಡಿಯಾ ಕ್ರಿಕೆಟಿಗರು ಬಿಸಿಸಿಐ ಆಡಳಿತ ಮಂಡಳಿ ಎದುರು ಬೇಡಿಕೆಯ ಪಟ್ಟಿ ಮುಂದಿಟ್ಟಿದ್ದಾರೆ.
ಇದರಲ್ಲಿ ಸಾಕಷ್ಟು ಬಾಳೆಹಣ್ಣುಗಳು ಬೇಕು ಎಂದೂ ಇದೆ! ಪ್ರವಾಸದುದ್ದಕ್ಕೂ ತಮ್ಮ ಜತೆಗೆ ಪತ್ನಿಯರನ್ನೂ ಕರೆದೊಯ್ಯಲು ಅವಕಾಶ ಕೊಡಬೇಕು. ಜತೆಗೆ ರೈಲು ಪ್ರಯಾಣ ಮಾಡಲು ಟಿಕೆಟ್ ಮುಂಗಡ ಕಾಯ್ದಿರಿಸಬೇಕು ಎಂದು ಕ್ರಿಕೆಟಿಗರು ಆಡಳಿತ ಮಂಡಳಿ ಎದುರು ಬೇಡಿಕೆ ಪಟ್ಟಿ ಇಟ್ಟಿದ್ದಾರೆ.
ಇಂಗ್ಲೆಂಡ್ ಪ್ರವಾಸ ಮಾಡಿದ್ದಾಗ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ತಮಗೆ ಬೇಕಾದ ಹಣ್ಣು ಒದಗಿಸಿರಲಿಲ್ಲ. ಅಭ್ಯಾಸ ನಡೆಸಲು ಉತ್ತಮ ಜಿಮ್ ಸೌಲಭ್ಯ ಬೇಕು ಎಂದೆಲ್ಲಾ ಬೇಡಿಕೆ ಪಟ್ಟಿ ಇಟ್ಟಿದೆ. ಮೊನ್ನೆಯಷ್ಟೇ ಹೈದರಾಬಾದ್ ನಲ್ಲಿ ನಡೆದ ಈ ಸಭೆಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಉಪ ನಾಯಕ ಅಜಿಂಕ್ಯಾ ರೆಹಾನೆ, ರೋಹಿತ್ ಶರ್ಮಾ, ಕೋಚ್ ರವಿಶಾಸ್ತ್ರಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.