Select Your Language

Notifications

webdunia
webdunia
webdunia
webdunia

ಬ್ಯಾಟಿಂಗ್ ನಲ್ಲಿ ವಿಶ್ವದಾಖಲೆ ಮಾಡಿದ ಬಳಿಕ ಫೀಲ್ಡಿಂಗ್ ನಲ್ಲೂ ಹೀರೋ ಆದ ರೋಹಿತ್ ಶರ್ಮಾ

ಬ್ಯಾಟಿಂಗ್ ನಲ್ಲಿ ವಿಶ್ವದಾಖಲೆ ಮಾಡಿದ ಬಳಿಕ ಫೀಲ್ಡಿಂಗ್ ನಲ್ಲೂ ಹೀರೋ ಆದ ರೋಹಿತ್ ಶರ್ಮಾ
ಮುಂಬೈ , ಮಂಗಳವಾರ, 30 ಅಕ್ಟೋಬರ್ 2018 (08:59 IST)
ಮುಂಬೈ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ನಾಲ್ಕನೇ ಏಕದಿನ ಪಂದ್ಯವನ್ನು ಟೀಂ ಇಂಡಿಯಾ 224 ರನ್ ಗಳ ಬೃಹತ್ ಅಂತರದಿಂದ ಗೆದ್ದುಕೊಂಡಿದೆ.

ಈ ಮೂಲಕ ಏಕದಿನ ಪಂದ್ಯದಲ್ಲಿ ಮೂರನೇ ಅತೀ ದೊಡ್ಡ ಜಯ ದಾಖಲಿಸಿದೆ. ಭಾರತದ 378 ರನ್ ಗಳ ಬೃಹತ್ ಗುರಿ ಬೆನ್ನತ್ತಿದ ವಿಂಡೀಸ್ 36.2 ಓವರ್ ಗಳಲ್ಲಿ ಕೇವಲ 153 ರನ್ ಗಳಿಗೆ ಆಲೌಟ್ ಆಯಿತು. ಖಲೀಲ್ ಅಹಮ್ಮದ್ ಮತ್ತು ಕುಲದೀಪ್ ಯಾದವ್ ತಲಾ 3 ವಿಕೆಟ್, ಭುವನೇಶ್ವರ್ ಕುಮಾರ್, ರವೀಂದ್ರ ಜಡೇಜಾ ತಲಾ 1 ವಿಕೆಟ್ ಕಬಳಿಸಿದರು.

ಎಲ್ಲಕ್ಕಿಂತ ಹೆಚ್ಚು ಹೈಲೈಟ್ ಆಗಿದ್ದು ರೋಹಿತ್ ಶರ್ಮಾ ಪರ್ಫಾರ್ಮೆನ್ಸ್. ಬ್ಯಾಟ್ ಮೂಲಕ 162 ರನ್ ಗಳಿಸಿ ಏಳನೇ ಬಾರಿ ಏಕದಿನ ಪಂದ್ಯದಲ್ಲಿ 150 ಪ್ಲಸ್ ರನ್ ಗಳಿಸಿದ ವಿಶ್ವದಾಖಲೆ ಮಾಡಿದ ರೋಹಿತ್, ಬಳಿಕ ಫೀಲ್ಡಿಂಗ್ ನಲ್ಲೂ ಮೂರು ಕ್ಯಾಚ್ ಪಡೆದು ಆಲ್ ರೌಂಡರ್ ಪ್ರದರ್ಶನ ನೀಡಿದರು. ಇದಕ್ಕೆ ಅರ್ಹವಾಗಿಯೇ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಒಲಿಯಿತು. ಇದರೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ ಭಾರತ 2-1 ರಿಂದ ಮುನ್ನಡೆ ಸಾಧಿಸಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ವೆಸ್ಟ್ ಇಂಡೀಸ್ ಏಕದಿನ: ಕೊಹ್ಲಿ ಸ್ಟೈಲಲ್ಲಿ ಶತಕ ಸಂಭ್ರಮಾಚರಣೆ ಮಾಡಿದ ರೋಹಿತ್ ಶರ್ಮಾ!