Publish Date: Mon, 29 Oct 2018 (08:54 IST)
Updated Date: Mon, 29 Oct 2018 (08:56 IST)
ಮುಂಬೈ: ಟಿ20 ಸರಣಿಗೆ ಟೀಂ ಇಂಡಿಯಾದಿಂದ ಕೈಬಿಡುವ ಬಗ್ಗೆ ಹಿರಿಯ ವಿಕೆಟ್ ಕೀಪರ್ ಧೋನಿಗೆ ಆಯ್ಕೆ ಸಮಿತಿ ಮೊದಲೇ ಸೂಚನೆ ನೀಡಿತ್ತಂತೆ!
ಆಯ್ಕೆ ಸಮಿತಿ ಸಭೆಗೂ ಮೊದಲೇ ಧೋನಿಗೆ ಯುವ ಆಟಗಾರನನ್ನು ಆಯ್ಕೆ ಮಾಡುವ ಬಗ್ಗೆ ಸೂಚನೆ ನೀಡಿತ್ತು ಎಂಬ ಅಂಶ ಬಿಸಿಸಿಐ ಮೂಲಗಳಿಂದ ಬೆಳಕಿಗೆ ಬಂದಿದೆ.
ಹೊಸ ಆಟಗಾರರಿಗೆ ಅವಕಾಶ ನೀಡುವ ಸಮಯ ಸನ್ನಿಹಿತವಾಗಿದೆ. ಹೀಗಾಗಿ ನಿಮ್ಮನ್ನು ಕೈ ಬಿಡಬೇಕಾಗುತ್ತದೆ ಎಂದು ಆಯ್ಕೆ ಸಮಿತಿ ಸ್ಪಷ್ಟವಾಗಿ ಹೇಳಿತ್ತಂತೆ. 2020 ರ ವಿಶ್ವಕಪ್ ಟಿ20 ಕ್ರಿಕೆಟ್ ಸರಣಿವರೆಗೆ ಧೋನಿ ತಂಡದಲ್ಲಿರಲಾರರು. ಈ ಉದ್ದೇಶದಿಂದ ಈಗಲೇ ಕಿರು ಮಾದರಿ ಕ್ರಿಕೆಟ್ ಗೆ ಹೊಸ ವಿಕೆಟ್ ಕೀಪರ್ ನ್ನು ಪಕ್ಕಾ ಮಾಡಲು ಆಯ್ಕೆ ಸಮಿತಿ ಈ ದಿಟ್ಟ ನಿರ್ಧಾರ ಕೈಗೊಂಡಿತ್ತು ಎನ್ನಲಾಗಿದೆ. ಈ ಮೂಲಕ ಆಯ್ಕೆ ಸಮಿತಿ ಧೋನಿ ನಿವೃತ್ತಿಗೆ ಪರೋಕ್ಷವಾಗಿ ಸೂಚನೆ ನೀಡಿದೆ. ಧೋನಿ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಕಾದು ನೋಡಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.