Publish Date: Mon, 29 Oct 2018 (08:45 IST)
Updated Date: Mon, 29 Oct 2018 (08:46 IST)
ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿಯಲ್ಲಿ ಸತತ ಮೂರು ಶತಕ ದಾಖಲಿಸಿ ದಾಖಲೆ ಮಾಡಿದ ಟೀಂ ಇಂಡಿಯಾ ರನ್ ಮೆಷಿನ್ ವಿರಾಟ್ ಕೊಹ್ಲಿಗೆ ಪಾಕ್ ಮಾಜಿ ವೇಗಿ ಶೊಯೇಬ್ ಅಖ್ತರ್ ಹೊಸ ಸವಾಲು ಹಾಕಿದ್ದಾರೆ.
ಸತತವಾಗಿ ಮೂರು ಶತಕ ದಾಖಲಿಸಿ ದಾಖಲೆ ಮಾಡಿರುವುದು ನಿಜಕ್ಕೂ ಅದ್ಭುತವೇ. ಈತ ನಿಜಕ್ಕೂ ರನ್ ಮೆಷಿನ್ ಎಂದು ಹೊಗಳಿದ ಅಖ್ತರ್ ನೀನು 120 ಶತಕಗಳ ಗುರಿ ಮುಟ್ಟಬೇಕು. ಅದು ನನ್ನ ಸವಾಲು ಎಂದು ಟ್ವೀಟ್ ಮಾಡಿದ್ದಾರೆ.
ಸಚಿನ್ ತೆಂಡುಲ್ಕರ್ ರಂತೆ ಕೊಹ್ಲಿ ಕೂಡಾ ಸವಾಲುಗಳಿಗೆ ಬ್ಯಾಟ್ ಮೂಲಕವೇ ಉತ್ತರಿಸಿ ಬೀಗುತ್ತಾರೆ. ಹಾಗಾಗಿ ಕೊಹ್ಲಿಯ ಸದ್ಯದ ಫಾರ್ಮ್ ನೋಡಿದರೆ ಅಖ್ತರ್ ಸವಾಲನ್ನು ಗಂಭೀರವಾಗಿ ಪರಿಗಣಿಸಿ ಗುರಿ ಮುಟ್ಟಿದರೂ ಅಚ್ಚರಿಪಡಬೇಕಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.