Publish Date: Sat, 27 Oct 2018 (17:30 IST)
Updated Date: Sat, 27 Oct 2018 (17:32 IST)
ಪುಣೆ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯುತ್ತಿರುವ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾಗೆ ಗೆಲ್ಲಲು ವಿಂಡೀಸ್ 284 ರನ್ ಗಳ ಗುರಿ ನೀಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ವಿಂಡೀಸ್ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 283 ರನ್ ಗಳಿಸಿತು. ವಿಂಡೀಸ್ ಪರ ಶೈ ಹೋಪ್ 95 ರನ್ ಗಳಿಸಿದರೆ ಶಿಮ್ರೋನ್ ಹೆಟ್ ಮೇರ್ 21 ಎಸೆತಗಳಲ್ಲಿ 37 ರನ್ ಗಳಿಸಿದರು. ಭಾರತದ ಪರ ಜಸ್ಪ್ರೀತ್ ಬುಮ್ರಾ 4 ವಿಕೆಟ್ ಪಡೆದರೆ, ಕುಲದೀಪ್ ಯಾದವ್ 2, ಯಜುವೇಂದ್ರ ಚಾಹಲ್, ಖಲೀಲ್ ಭುವನೇಶ್ವರ್ ಕುಮಾರ್ ತಲಾ 1 ವಿಕೆಟ್ ಪಡೆದರು.
ಎಲ್ಲಕ್ಕಿಂತ ಹೆಚ್ಚಾಗಿ ಧೋನಿ ಚಂದ್ರಪಾಲ್ ಹೇಮರಾಜ್ ವಿಕೆಟ್ ಕ್ಯಾಚ್ ಪಡೆದಿದ್ದು ಅಭಿಮಾನಿಗಳ ಕಣ್ಸೆಳೆಯಿತು. ವಿಕೆಟ್ ಹಿಂದುಗಡೆ ಓಡುತ್ತಾ ಹೋಗಿ ಧೋನಿ ಪಡೆದ ಕ್ಯಾಚ್ ನಿಂದಾಗಿ ಭಾರತಕ್ಕೆ ಮೊದಲ ವಿಕೆಟ್ ಸಿಕ್ಕಿತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.