Select Your Language

Notifications

webdunia
webdunia
webdunia
webdunia

ವಿಶಾಖಪಟ್ಟಣ ವಿಮಾನನಿಲ್ದಾಣದಲ್ಲಿ ಟೀಂ ಇಂಡಿಯಾವನ್ನು ಭದ್ರತಾ ಪಡೆ ತಡೆದಿದ್ದೇಕೆ?!

ಭಾರತ-ವೆಸ್ಟ್ ಇಂಡೀಸ್ ಏಕದಿನ
ವಿಶಾಖಪಟ್ಟಣ , ಶನಿವಾರ, 27 ಅಕ್ಟೋಬರ್ 2018 (08:26 IST)
ವಿಶಾಖಪಟ್ಟಣ: ಪುಣೆಯಲ್ಲಿ ನಡೆಯಲಿದ್ದ ಮೂರನೇ ಏಕದಿನ ಪಂದ್ಯಕ್ಕಾಗಿ ವಿಶಾಖಪಟ್ಟಣ ವಿಮಾನ ನಿಲ್ದಾಣದ ಮೂಲಕ ಹೊರಟಿದ್ದ ಟೀಂ ಇಂಡಿಯಾವನ್ನು ಭದ್ರತಾ ಪಡೆ ಕೆಲವು ಕಾಲ ತಡೆಹಿಡಿದಿದೆ.

ಇದಕ್ಕೆ ಕಾರಣ ಟೀಂ ಇಂಡಿಯಾ ಇಲ್ಲಿಗೆ ತಲುಪುವ ಮೊದಲು ವೈಎಸ್ ಆರ್ ಕಾಂಗ್ರೆಸ್ ಅಧ್ಯಕ್ಷ ಜಗಮೋಹನ್ ರೆಡ್ಡಿ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಸೆಲ್ಫೀ ತೆಗೆಯುವ ನೆಪದಲ್ಲಿ ಬಳಿ ಬಂದು ಚಾಕುವಿನಿಂದ ಇರಿದಿದ್ದ.

ಈ ಕಾರಣಕ್ಕಾಗಿ ಎರಡು ಬಸ್ ಗಳಲ್ಲಿ ಬಂದ ಆಟಗಾರರನ್ನು ಕೆಲವು ಕಾಲ ಬಸ್ ನಲ್ಲಿಯೇ ಕೂರಲು ಹೇಳಲಾಯಿತು. ಇಲ್ಲಿ ಭದ್ರತೆ ತಪಾಸಣೆ ಬಳಿಕವಷ್ಟೇ ಆಟಗಾರರಿಗೆ ವಿಮಾನವೇರಲು ಅವಕಾಶ ನೀಡಲಾಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ವಿಂಡೀಸ್ ಮೂರನೇ ಏಕದಿನ: ವಿಶ್ವದಾಖಲೆ ಮಾಡುವ ಕನಸಿನಲ್ಲಿ ಕುಲದೀಪ್ ಯಾದವ್