ಮುಂಬೈ: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಎರಡು ಏಕದಿನ ಪಂದ್ಯದಲ್ಲಿ ಭಾರತ ತಂಡದ ಬೌಲರ್ ಗಳ ನಿರಾಶದಾಯಕ ಪ್ರದರ್ಶನದ ನಂತರ ಅಂತಿಮ ಮೂರು ಏಕದಿನ ಪಂದ್ಯಕ್ಕೆ ಇಬ್ಬರು ಪ್ರಮುಖ ವೇಗಿಗಳನ್ನು ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ.
									
			
			 
 			
 
 			
					
			        							
								
																	ಕೊನೆಯ ಮೂರು ಪಂದ್ಯಗಳಿಗೆ 15 ಸದಸ್ಯರ ತಂಡ ಪ್ರಕಟಿಸಿದ ಬಿಸಿಸಿಐ ಏಕದಿನ ಸ್ಪೆಷಲಿಸ್ಟ್ ಗಳಾದ ಭುವನೇಶ್ವರ್ ಕುಮಾರ್ ಮತ್ತು ಜಸ್ಪ್ರೀತ್ ಬುಮ್ರಾರನ್ನು ಮರಳಿ ಕರೆಸಿದೆ.
									
										
								
																	ಈಗಾಗಲೇ ಶ್ರಾದ್ಧೂಲ್ ಠಾಕೂರ್ ಗಾಯದ ಕಾರಣದಿಂದ ಹೊರ ನಡೆದಿದ್ದಾರೆ. ಇನ್ನು, ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ವಿಪರೀತ ರನ್ ಬಿಟ್ಟುಕೊಟ್ಟಿದ್ದ ಮೊಹಮ್ಮದ್ ಶಮಿಗೆ ಕೊಕ್ ನೀಡಲಾಗಿದೆ. ಉಳಿದಂತೆ ಮೊದಲಿನ ತಂಡವನ್ನೇ ಉಳಿಸಿಕೊಳ್ಳಲಾಗಿದೆ.
									
											
							                     
							
							
			        							
								
																	ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.