Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿಯ ವಿಶ್ವದಾಖಲೆಯಿಂದ ಬಚವಾಯ್ತು ಟೀಂ ಇಂಡಿಯಾ

ವಿರಾಟ್ ಕೊಹ್ಲಿಯ ವಿಶ್ವದಾಖಲೆಯಿಂದ ಬಚವಾಯ್ತು ಟೀಂ ಇಂಡಿಯಾ
ವಿಶಾಖಪಟ್ಟಣ , ಬುಧವಾರ, 24 ಅಕ್ಟೋಬರ್ 2018 (17:24 IST)
ವಿಶಾಖಪಟ್ಟಣ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯುತ್ತಿರುವ ದ್ವಿತೀಯ ಏಕದಿನ ಪಂದ್ಯದಲ್ಲಿ 81 ರನ್ ಗಳಿಸಿದಾಗ ನಾಯಕ ವಿರಾಟ್ ಕೊಹ್ಲಿ ಅತ್ಯಂತ ವೇಗವಾಗಿ ಏಕದಿನ ಪಂದ್ಯಗಳಲ್ಲಿ 10 ಸಾವಿರ ರನ್ ಗಳಿಸಿದ ವಿಶ್ವದಾಖಲೆ ಮಾಡಿದರು.

ಕೊನೆಯವರೆಗೂ ನಾಟೌಟ್ ಆಗಿ ಉಳಿದ ಕೊಹ್ಲಿ 37 ನೇ ಏಕದಿನ ಶತಕ ಸಿಡಿಸಿದರು. 129 ಎಸೆತಗಳಲ್ಲಿ ಸಿಕ್ಸರ್ ಮತ್ತು ಬೌಂಡರಿಗಳೊಂದಿಗೆ ಅವರು ಅಂತಿಮವಾಗಿ 157 ರನ್ ಗಳಿಸಿದರು. ಆರಂಭದಲ್ಲಿ ಬಹುಬೇಗ ಎರಡು ವಿಕೆಟ್ ಕಳೆದುಕೊಂಡು ತಂಡ ಸಂಕಷ್ಟದಲ್ಲಿದ್ದಾಗ ಕ್ರೀಸ್ ಗೆ ಬಂದ ವಿರಾಟ್ ಕೊಹ್ಲಿ ಎಂದಿನಂತೆ ಅದ್ಭುತ ಆಟವಾಡಿದರು. ಬಹುಶಃ ಅವರು ವಿಶ್ವದಾಖಲೆಯ ಇನಿಂಗ್ಸ್ ಆಡದೇ ಇರುತ್ತಿದ್ದರೆ ಟೀಂ ಇಂಡಿಯಾ ಬ್ಯಾಟಿಂಗ್ ಶೋಚನೀಯವಾಗುತ್ತಿತ್ತು.

ವಿರಾಟ್ ಕೊಹ್ಲಿಗೆ ಉತ್ತಮ ಸಾಥ್ ನೀಡಿದ ಅಂಬುಟಿ ರಾಯುಡು 73 ರನ್ ಗಳಿಸಿ ಔಟಾದರು. ಕೇವಲ 205 ಇನಿಂಗ್ಸ್ ಗಳಿಂದ 10 ಸಾವಿರ ರನ್ ಪೂರೈಸಿ ಸಚಿನ್ ತೆಂಡುಲ್ಕರ್ ರ 259 ಇನಿಂಗ್ಸ್ ಗಳಿಂದ 10 ಸಾವಿರ ರನ್ ಪೂರೈಸಿದ ದಾಖಲೆ ಮೀರಿದರು. ದುರದೃಷ್ಟವಶಾತ್ ಉಳಿದ ಯಾವುದೇ ಬ್ಯಾಟ್ಸ್ ಮನ್ ಗಳಿಂದ ಹೇಳಿಕೊಳ್ಳುವಂತ ಆಟ ಬರಲಿಲ್ಲ. ಉತ್ತಮ ಲಯದಲ್ಲಿದ್ದ ಧೋನಿ 20 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಟೀಂ ಇಂಡಿಯಾ ವಿಂಡೀಸ್ ಗೆ ಗೆಲ್ಲಲು 322 ರನ್ ಗಳ ಗುರಿ ನೀಡಿದೆ. ಭಾರತ ನಿಗದಿತ 50 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 321 ರನ್ ಗಳಿಸಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ವಿಂಡೀಸ್ ದ್ವಿತೀಯ ಏಕದಿನ ಶುರು: ವಿರಾಟ್ ವಿಶ್ವದಾಖಲೆಗಾಗಿ ಕಾದಿದೆ ವಿಶಾಖಪಟ್ಟಣ