Publish Date: Wed, 24 Oct 2018 (08:50 IST)
Updated Date: Wed, 24 Oct 2018 (08:51 IST)
ವಿಶಾಖಪಟ್ಟಣ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದು ವಿಶಾಖಪಟ್ಟಣದಲ್ಲಿ ದ್ವಿತೀಯ ಪಂದ್ಯ ನಡೆಯಲಿದ್ದು, ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಧೋನಿ ನಡುವೆ ಒಂದೇ ದಾಖಲೆ ಮಾಡಲು ಪೈಪೋಟಿ ನಡೆಯಲಿದೆ.
ಏಕದಿನ ಪಂದ್ಯಗಳಲ್ಲಿ 10 ಸಾವಿರ ರನ್ ಗಳಿಸಿದ ಆಟಗಾರರ ಸಾಲಿಗೆ ಸೇರಲು ಈ ಇಬ್ಬರೂ ಆಟಗಾರರ ನಡುವೆ ಪೈಪೋಟಿ ಏರ್ಪಡಲಿದೆ.
ಇವರ ಪೈಕಿ ಕೊಹ್ಲಿಗೆ ಈ ದಾಖಲೆ ಮಾಡಲು ಇನ್ನೂ 81 ರನ್ ಬೇಕು. ಆದರೆ ಧೋನಿಗೆ 51 ರನ್ ಗಳಿಸಿದರೆ ಸಾಕು. ಆದರೆ ಮೂರನೇ ಕ್ರಮಾಂಕದಲ್ಲಿ ಆಡಲಿಳಿಯುವ ಕೊಹ್ಲಿಗೆ ಈ ಅವಕಾಶ ಸಿಗಬಹುದು. ಆದರೆ ಕೆಳ ಕ್ರಮಾಂಕದಲ್ಲಿ ಆಡುವ ಧೋನಿಗೆ ಬ್ಯಾಟಿಂಗ್ ಅವಕಾಶ ಸಿಗುವುದು ಕಡಿಮೆ. ಹಾಗಾಗಿ ಯಾರು ಮೊದಲು ಈ ಗುರಿ ಮುಟ್ಟುತ್ತಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.